ಮೂಲ್ಕಿ:ಸಾರ್ವಜನಿಕ ಶ್ರದ್ಧಾಂಜಲಿ ಸಭೆ
Friday, September 15, 2023
ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘ (ರಿ.) ನ ನೇತ್ರತ್ವದಲ್ಲಿ
ಬದುಕಿನ ಜೀವನುದ್ದಕ್ಕೂ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸೇವೆ ಎಂಬ ಯಜ್ಞದಲ್ಲಿ ನಿಸ್ವಾರ್ಥವಾಗಿ ಅಹರ್ನಿಶಿ. ಸೇವೆ ಸಲ್ಲಿಸಿ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ, ಮೂಲ್ಕಿ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ, ಮೂಲ್ಕಿ ಲಯನ್ಸ್ ಕ್ಲಬ್, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ಸಹಿತ ವಿವಿಧ ಧಾರ್ಮಿಕ ಕ್ಷೇತ್ರದಲ್ಲಿ ಗೌರವ ಹುದ್ದೆ ಅಲಂಕರಿಸಿ, ಜನಾನುರಾಗಿಯಾಗಿದ್ದು ಸೆಪ್ತಂಬರ್ 10 ರಂದು ದ್ಯೆವಾಧೀನರಾದ ಮೂಲ್ಕಿಯ ಲಲಿತ್ ಮಹಲ್ ನ ಮಾಲಕ ಹರಿಶ್ಚಂದ್ರ ವಿ. ಕೋಟ್ಯಾನ್ ರ ಆತ್ಮಕ್ಕೆ ಚಿರಶಾಂತಿಯನ್ನು ಕೋರಲೆಂದು ಸೆಪ್ತಂಬರ್ 17 ರ ಆದಿತ್ಯವಾರ ಮಧ್ಯಾಹ್ನ 3.30ಕ್ಕೆ ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಬ್ರಹ್ಮ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನು ಕರೆಯಲಾಗಿದೆ. ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಅವರ ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಮೂಲ್ಕಿ ಬಿಲ್ಲವ ಸಂಘದ ಪ್ರಕಟಣೆ ತಿಳಿಸಿದೆ.