-->

ಬಾಯಿಯ ಆರೋಗ್ಯ ಮತ್ತು ದಂತ ವೈದ್ಯಕೀಯ ಶಿಬಿರ'

ಬಾಯಿಯ ಆರೋಗ್ಯ ಮತ್ತು ದಂತ ವೈದ್ಯಕೀಯ ಶಿಬಿರ'

ಮೂಲ್ಕಿ:ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಕಾಲೇಜಿನ ಡಿಪಾರ್ಟ್ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿಯ ಸಹಕಾರದೊಂದಿಗೆ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಯರ್ ವತಿಯಿಂದ ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲಿನಲ್ಲಿ  ಸೆ.16 ರಂದು 'ಬಾಯಿಯ ಆರೋಗ್ಯ ಮತ್ತು ದಂತ ವೈದ್ಯಕೀಯ ಶಿಬಿರ' ನಡೆಯಿತು.

ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ  ಲ. ಸುಧೀರ್ ಬಾಳಿಗ  ಅವರು ಮಕ್ಕಳ ಆರೋಗ್ಯದ ಬಗ್ಗೆ  ಕಾಳಜಿಯನ್ನು ವಹಿಸುವುದು  ಕ್ಲಬ್ಬಿನ ಧ್ಯೇಯ ಎಂದರು.  ಶ್ರೀನಿವಾಸ ಆಸ್ಪತ್ರೆಯ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥೆ ಡಾ|ಶ್ರೀವಿದ್ಯಾ ಭಟ್ ಶಾಲಾ ವಿದ್ಯಾರ್ಥಿಗಳಿಗೆ ಬಾಯಿ ಮತ್ತು ಹಲ್ಲಿನ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿ ತಮ್ಮ ಸಿಬ್ಬಂದಿಗಳ ಜೊತೆ ಹಲ್ಲನ್ನು ಸರಿಯಾಗಿ ಉಜ್ಜುವ ರೀತಿ, ಬಾಯಿಯ ಆರೋಗ್ಯದ ಪ್ರಾತ್ಯಕ್ಷಿಕೆಗಳನ್ನು ತೋರಿಸಿಕೊಟ್ಟರು. 

ಶಾಲಾ ಪ್ರಾಂಶುಪಾಲ  ಜಿತೇಂದ್ರ ವಿ ರಾವ್ ಪ್ರಸ್ತಾವನೆಗೈದು ಶಿಕ್ಷಣದ ಜತೆ ಜತೆಗೆ ಶಾಲಾ ಮಕ್ಕಳ ಆರೋಗ್ಯದ ಕಾಳಜಿಯೂ ನಮ್ಮ ಆದ್ಯತೆಯಾಗಿದ್ದು, ಶ್ರೀನಿವಾಸ ಆಸ್ಪತ್ರೆ ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಯರ್ ಸಹಕಾರವನ್ನು ಪ್ರಶಂಸಿಸಿದರು. 
ಸಹಶಿಕ್ಷಕಿ ಪ್ರಜ್ವಲಾ ನಿರೂಪಿಸಿದರು. ಸಹಶಿಕ್ಷಕಿ ದೀಪಿಕಾ  ಸ್ವಾಗತಿಸಿದರು.ಸಹಶಿಕ್ಷಕಿ ಹೇಮಲತಾ ವಂದಿಸಿದರು. ಕಾರ್ಯಕ್ರಮದಲ್ಲಿ ದಂತವೈದ್ಯೆ ಡಾ। ಆರ್ದೃ ಭಟ್, ಲಯನ್ ವಲಯಾಧ್ಯಕ್ಷ  ಪ್ರತಿಭಾ ಹೆಬ್ಬಾರ್,  ಕಾರ್ಯದರ್ಶಿ ಲ. ಪುಷ್ಪರಾಜ್ ಚೌಟ ಉಪಸ್ಥಿತರಿದ್ದರು.  ಶ್ರೀನಿವಾಸ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಮಕ್ಕಳ ದಂತತಪಾಸಣೆ ನಡೆಸಿಕೊಟ್ಟರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807