-->

ಕರಂಬಾರು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಕರಂಬಾರು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಬಜಪೆ:ಹಳೆ ವಿದ್ಯಾರ್ಥಿ ಸಂಘ (ರಿ ) ಕರಂಬಾರು, ಶಾಲಾಭಿವೃದ್ಧಿ ಸಮಿತಿ ಮತ್ತು ಲಯನ್ಸ್ ಕ್ಲಬ್, ಮಂಗಳೂರು, ವೆಲೆನ್ಸಿಯ ಇದರ ಸಹಕಾರದೊಂದಿಗೆ ಶಿಕ್ಷಕರ ದಿನಾಚರಣೆಯು ಸರಕಾರಿ ಪ್ರಾಥಮಿಕ ಶಾಲೆಯ  ಸಭಾಂಗಣದಲ್ಲಿ ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ ಕಿರಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ವೆಲೆನ್ಸಿಯ ಮಂಗಳೂರು ಇದರ ಅಧ್ಯಕ್ಷ ಲ. ಲೆಸ್ಲಿ ಡಿಸೋಜಾ  ವಹಿಸಿದ್ದರು.   ಕಾರ್ಯಕ್ರಮದಲ್ಲಿ ಶ್ರೀ ದೇವಿ ತಾಂತ್ರಿಕ ಕಾಲೇಜು ಕೆಂಜಾರುವಿನ  ಡಾ! ಗಾಯತ್ರಿ B. J ( HOD, MBA dept.) ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ  ಶಿಕ್ಷಕರನ್ನು ಗೌರವಿಸಬೇಕು.ಜೀವನದ ಯಶಸ್ವಿಗೆ  ಶಿಕ್ಷಕರೇ ಪ್ರೇರಣೆಯಾಗುತ್ತಾರೆ. ಶಿಕ್ಷಕರು ಮನಸ್ಸು ಮಾಡಿದರೆ ಯಾವ ವಿದ್ಯಾರ್ಥಿ ಯನ್ನೂ  ಪರಿವರ್ತಿಸಬಹುದು ಎಂದರು. ಶಾಲಾಭಿವೃದ್ದಿಯ ಅಧ್ಯಕ್ಷ  ರಾಘವೇಂದ್ರ. ಎಸ್  ಮುಖ್ಯ ಅತಿಥಿಗಳಾಗಿದ್ದರು.
ಕರಂಬಾರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ   ಸತೀಶ್ ದೇವಾಡಿಗ ,ಲಯನ್ಸ್ ಕ್ಲಬ್ ವೆಲೆನ್ಸಿಯ ಮಂಗಳೂರು ಕಾರ್ಯದರ್ಶಿ  ವಲ್ಸ ಜೀವನ್, ಕೋಶಾಧಿಕಾರಿ  ಲಾರೆನ್ಸ್ ಸೇರಾವೊ, ಶ್ರೀ ರೋನಾಲ್ಡ್, ಸಿಂಜಿನ್ ಕಂಪನಿಯ ನಿವೃತ್ತ  ಮ್ಯಾನೇಜರ್   ಶ್ರೀ ರೋನಾಲ್ಡ್ ಮಸ್ಕೇರೆನ್ಹಸ್ ಹಾಗೂ    ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರನ್ನು ಹಾಗೂ  ಅಕ್ಷರ ದಾಸೋಹ ಸಿಬ್ಬಂದಿಯನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು. ಗುಣಪಾಲ್ ದೇವಾಡಿಗ ಸ್ವಾಗತಿಸಿದರು, ರಾಕೇಶ್ ಕುಂದರ್ ಕಾರ್ಯಕ್ರಮ  ನಿರೂಪಿಸಿದರು, ಪ್ರವೀಣ್ ಆಚಾರ್ಯ ವಂದಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807