-->

ಬಾರ್ದಿಲ ದೇವರಗುಡ್ಡೆಯ ಶ್ರೀಸಾಂಬಸದಾಶಿವ ದೇವಸ್ಥಾನದ ನೂತನ ಗರ್ಭಗ್ರಹದ ಶಿಲಾನ್ಯಾಸ ಸಮಾರಂಭ

ಬಾರ್ದಿಲ ದೇವರಗುಡ್ಡೆಯ ಶ್ರೀಸಾಂಬಸದಾಶಿವ ದೇವಸ್ಥಾನದ ನೂತನ ಗರ್ಭಗ್ರಹದ ಶಿಲಾನ್ಯಾಸ ಸಮಾರಂಭ

ಬಜಪೆ:ಶ್ರೀಸಾಂಬಸದಾಶಿವ ದೇವಸ್ಥಾನ ಬಾರ್ದಿಲ ದೇವರಗುಡ್ಡೆಯ ಶ್ರೀಸಾಂಬಸದಾಶಿವ ದೇವಸ್ಥಾನದ ನೂತನ ಗರ್ಭಗ್ರಹದ ಶಿಲಾನ್ಯಾಸ ಸಮಾರಂಭವು ಕ್ಷೇತ್ರದ ತಂತ್ರಿಗಳಾದ ಡಾ.ದೇರೆಬೈಲ್ ಶಿವಪ್ರಸಾದ್ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಸೋಮವಾರದಂದು  ನೆರವೇರಿತು.ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ  ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಾಂಜನೇಯ ಕ್ಷೇತ್ರ ದಕ್ಷಿಣಗಾಣಿಗಪುರದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಅವರು ಶುಭಾಶೀರ್ವಾದ ನೀಡಿದರು. 

ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸೂಚರಿತ ಶೆಟ್ಟಿ ಕೆ.ಪಿ.  ಪ್ರಥ್ವಿರಾಜ್ ಆರ್.ಕೆ., ನ್ಯಾಯವಾದಿಗಳಾದ ಚೇತನ್ ಕುಮಾರ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ ಮಾತನಾಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಸೋಮಶೇಖರ್ ಶೆಟ್ಟಿ ಉಳಿಪಾಡಿಗುತ್ತು ಮತ್ತು ಸದಸ್ಯರು, ಕುಪ್ಪೆಪದವು ಶ್ರೀ ದುರ್ಗೆಶ್ವರೀ ದೇವಸ್ಥಾನದ ಮ್ಯಾನೇಜಿಂಗ್ ಟ್ರಷ್ಟಿ ಪ್ರವೀಣ್ ಕುಮಾರ್ ಜೈನ್ ಅಗರಿ,  ಕಿಲೆಂಜಾರು ಅರಮನೆಯ ಮುಖ್ಯಸ್ಥ ದಿನೇಶ್ ಕುಮಾರ್ ಬಲ್ಲಾಳ್, ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಗೌರವ ಉಪಾಧ್ಯಕ್ಷ ಸತೀಶ್ಚಂದ್ರ ಪಾಣಿಲ, ಉಪಾಧ್ಯಕ್ಷ ಗಿರೀಶ್ ಆಳ್ವ ಕಂಗಿನಡಿ, ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಕಾರಂತ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋಹನ್ ಆಚಾರ್ಯ ಪ್ರಾರ್ಥನೆ ನೆರವೇರಿಸಿದರು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಸಾದ್ ಶೆಟ್ಟಿ ಬೋಂಡಾಲ ಇರುವೈಲು ನಿರೂಪಿಸಿ, ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ವಿನೋದ್ ಕುಮಾರ್ ಅಂಬೆಲೊಟ್ಟು ವಂದಿಸಿದರು.
ಇರುವೈಲು, ಕಿಲೆಂಜಾರು, ಕುಲವೂರು ಮತ್ತು ಮುತ್ತೂರು ಗ್ರಾಮಗಳ ಗಣ್ಯರು, ಭಕ್ತಾದಿಗಳು, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807