ಗುರುಪುರ : ಎಸ್‌ಸಿ-ಎಸ್‌ಟಿ ಕಾಲೊನಿಯಲ್ಲಿ`ಸಭಾಭವನ' ನಿರ್ಮಾಣಕ್ಕೆ ಡಾ. ಭರತ್ ಶೆಟ್ಟಿ ಗುದ್ದಲಿಪೂಜೆ
Wednesday, September 20, 2023
ಗುರುಪುರ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್ ಮತ್ತು ಗುರುಪುರ ಗ್ರಾಮ ಪಂಚಾಯತ್ 2017-18ನೇ ಸಾಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅನುದಾನದಡಿ ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದ ಬಳಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಂಟಿ ಕಾಲೊನಿಯಲ್ಲಿ ನೂತನ `ಸಭಾಭವನ' ನಿರ್ಮಾಣಕ್ಕೆ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಗುದ್ದಲಿಪೂಜೆ ನೆರವೇರಿಸಿದರು.
ಮಾಧ್ಯಮದೊಂದಿಗೆ ಶಾಸಕರು ಮಾತನಾಡಿ, ಇದು 12 ಲಕ್ಷ ರೂ ಅನುದಾನದ ಕಾಮಗಾರಿಯಾಗಿದ್ದು, ಸಭಾಭವನ ರಚನೆಗೆ ಅಗತ್ಯವಿರುವ ಉಳಿಕೆ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಕಾಲೊನಿ ಮಂದಿಗೆ ಭರವಸೆ ನೀಡಿದರು.