ಕುಪ್ಪೆಪದವು ಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ 169 ನೇ ಗುರು ಪೂಜೆಯ ಆಚರಣೆ ಹಾಗೂ ವಿವಿಧ ಸೌಲಭ್ಯದ ಉದ್ಘಾಟನೆ ,ಕಾಮಗಾರಿಗೆ ಚಾಲನೆ ಕಾರ್ಯಕ್ರಮ
Sunday, September 3, 2023
ಬಜಪೆ:ಶ್ರೀ ನಾರಾಯಣ ಗುರು ಸೇವಾ ಸಮಿತಿ ಕುಪ್ಪೆ ಪದವು ಇದರ ವತಿಯಿಂದ 169 ನೇ ಗುರು ಪೂಜೆಯ ಆಚರಣೆ ಹಾಗೂ ವಿವಿಧ ಸೌಲಭ್ಯದ ಉದ್ಘಾಟನೆ ,ಕಾಮಗಾರಿಗೆ ಚಾಲನೆ ಕಾರ್ಯಕ್ರಮ ರವಿವಾರ ಜರಗಿತು.
ಜಿಲ್ಲಾ ಪಂಚಾಯತ್ 4 ಲಕ್ಷ ರೂ. ಅನುದಾನದಲ್ಲಿ ಸಂಘಕ್ಕೆ ಕೊಡ ಮಾಡಿದ ಶೌಚಾಲಯದ ಉದ್ಘಾಟನೆ, 5 ಲಕ್ಷ ರೂ.ಸಂಸದರ ಅನುದಾನದಲ್ಲಿ ಸಂಘದ ತಡೆಗೋಡೆಗೆ ಗುದ್ದಲಿ ಪೂಜೆಯನ್ನು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಈ ಸಂದರ್ಭ ನೆರವೇರಿಸಿದರು.
ಸಂಘದ ಅಧ್ಯಕ್ಷ ರಾಮಚಂದ್ರ ಸಾಲಿಯನ್, ಕಾರ್ಯದರ್ಶಿ ರಘು ಎಂ ಅಗರಿ,ಯುವ ವೇದಿಕೆಯ ಅಧ್ಯಕ್ಷ ಶೇಖರ್ ಪೂಜಾರಿ, ಉಪಾಧ್ಯಕ್ಷರಾದ ಚಂದ್ರ ಬಿ, ಮಹಾಬಲ ಸಾಲಿಯಾನ್, ವಿನೋದ್ ಕುಮಾರ್ ಅಂಬೆ ಲೊಟ್ಟು,ಮುತ್ತೂರು ಪಂಚಾಯಿತಿನ ಮಾಜಿ ಅಧ್ಯಕ್ಷ ಸತೀಶ್ ಬಲ್ಲಾಜೆ, ನೂತನ ಅಧ್ಯಕ್ಷರಾದ ಪ್ರವೀಣ್ ಅಲ್ವಾ ಗುಂಡ್ಯ, ಉಪಾಧ್ಯಕ್ಷ ಸುಷ್ಮಾ,ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕೃಷ್ಣ ಅಮೀನ್, ದುರ್ಗೇಶ್ವರಿ ಜಿ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಪ್ರವೀಣ್ ಕುಮಾರ್ ಜೈನ್, ಮುತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕಲಾ, ಬಿಲ್ಲವ ಮುಖಂಡರು ಉಪಸಿತರಿದ್ದರು.