ತೋಕೂರಿನ ಹಿಂದುಸ್ತಾನಿ ಶಾಲೆಯ ಅಡ್ಡ ರಸ್ತೆ ಬಳಿ ,ರಸ್ತೆ ಸುರಕ್ಷಾ ಪೀನ ಗಾಜು ಅಳವಡಿಕೆ
Thursday, August 31, 2023
ತೋಕೂರು : ನೆಹರು ಯುವ ಕೇಂದ್ರ ಮಂಗಳೂರು,ರಜತಾ ಮಹೋತ್ಸವ ಸಮಿತಿ ಮಹಿಳಾ ಮಂಡಲ (ರಿ.) ತೋಕೂರು, ಯುವಕ ಸಂಘ (ರಿ) ತೋಕೂರು ,ರೋಟರಿ ಸಮುದಾಯದಳ ತೋಕೂರು
ಇವರ ಸಂಯುಕ್ತ ಆಶ್ರಯದಲ್ಲಿ ತೋಕೂರಿನ ಹಿಂದುಸ್ತಾನಿ ಶಾಲೆಯ ಅಡ್ಡ ರಸ್ತೆ ಬಳಿ ,ರಸ್ತೆ ಸುರಕ್ಷಾ ಪೀನ ಗಾಜು ಅಳವಡಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಅನುಪಮಾ ಎ ರಾವ್, ಯುವಕ ಸಂಘದ ಅಧ್ಯಕ್ಷರಾದ ಶ್ರೀ ಶೇಖರ ಶೆಟ್ಟಿಗಾರ್ ಹಾಗೂ ಪಡುಪಣಂಬೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಹೇಮನಾಥ ಅಮೀನ್ ಹಾಗೂ ಜಂಟಿ ಸಂಸ್ಥೆಗಳ ಸದಸ್ಯರು ಭಾಗವಹಿಸಿದರು.