-->


 ಜೀವನದಲ್ಲಿ ಗುರು ಹಿರಿಯರಿಗೆ ವಿಧೇಯರಾಗುವ ಮೂಲಕ ಸಾಧಕರಾಗಿ -ಜ್ಯೋತಿಷಿ ವಿಶ್ವನಾಥ ಭಟ್

ಜೀವನದಲ್ಲಿ ಗುರು ಹಿರಿಯರಿಗೆ ವಿಧೇಯರಾಗುವ ಮೂಲಕ ಸಾಧಕರಾಗಿ -ಜ್ಯೋತಿಷಿ ವಿಶ್ವನಾಥ ಭಟ್

ಮುಲ್ಕಿ: ಕಿಲ್ಪಾಡಿ ಹಿರಿಯ ಸಾಧಕ ಜ್ಯೋತಿಷ್ಯ ರತ್ನ ದಿ.ಗೋವಿಂದ ಭಟ್ ಜನ್ಮದಿನದ ಪ್ರಯುಕ್ತ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ಮುಲ್ಕಿಯ ಸಿಎಸ್ಐ ಬಾಲಿಕಾಶ್ರಮ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.
ಈ ಸಂದರ್ಭ ಹಿರಿಯ ಜ್ಯೋತಿಷಿ ವಿಶ್ವನಾಥ ಭಟ್ ಮಾತನಾಡಿ ಎಳವೆಯಲ್ಲಿ ನಮಗೆ  ಉತ್ತಮ ಜೀವನ ಕಲಿಸಿ ಸಮಾಜದಲ್ಲಿ ಯೋಗ್ಯರನ್ನಾಗಿ ಮಾಡಿದ ಮಾತಾ ಪಿತೃಗಳ ಋಣ ಸಂದಾಯ ದೊಡ್ಡ ಭಾಗ್ಯವಾಗಿದ್ದು ಜೀವನದಲ್ಲಿ ಗುರು ಹಿರಿಯರಿಗೆ ವಿಧೇಯರಾಗುವ ಮೂಲಕ ಸಾಧಕರಾಗಿ ಎಂದರು 
ಈ ಸಂದರ್ಭ ಉಷಾ ವಿಶ್ವನಾಥ ಭಟ್, ಬಪ್ಪನಾಡು ಲಯನ್ಸ್  ಕ್ಲಬ್ ಇನ್ಸ್ಪೈರ್ ನ ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಅಧ್ಯಕ್ಷ ಸುಧೀರ್ ಬಾಳಿಗ, ಸದಸ್ಯರಾದ ಭಾಸ್ಕರ್ ಕಾಂಚನ್, ಉದ್ಯಮಿ ಸಾಧಿಕ್ ಉಡುಪಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಸಂಚಾಲಕ ಪುನೀತ್ ಕೃಷ್ಣ, ಗುರುಪ್ರಸಾದ್ ಭಟ್ ಮುಂಡ್ಕೂರು ಮತ್ತಿತರರು ಉಪಸ್ಥಿತರಿದ್ದರು
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article