ಕಿನ್ನಿಗೋಳಿ: ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ರಾಯರ ಆರಾಧನೆ-ಧಾರ್ಮಿಕ ಸಭೆ
Saturday, September 2, 2023
ಕಿನ್ನಿಗೋಳಿ : ಶ್ರೀ ರಾಘವೇಂದ್ರ ಸ್ವಾಮಿಗಳು ಯುಗಪುರುಷರು. ಅವರು ಧಾರ್ಮಿಕತೆಯ ಜತೆಗೆ ಸಮಾಜದ ಅಭಿವೃದ್ಧಿಯ ಹರಿಕಾರರಾಗಿದ್ದರು. ಅವರ ಆರಾಧನೆ ಒಂದು ಯಜ್ಞದಂತೆ. ಅದರ ಫಲ ಸಮಾಜಕ್ಕೆ ದೊರೆಯಬೇಕು ಎಂದು ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಹೇಳಿದರು. ಅವರು ಕಿನ್ನಿಗೋಳಿ ಯುಗಪುರುಷ ವಲಯದ ಶ್ರೀಮದ್ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಸ್ವಾಮಿಗಳ ಆರಾಧನಾ ಮಹೋತ್ಸವದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ನಿವೃತ್ತ ಉಪತಹಶೀಲ್ದಾರ್ ವೈ. ಯೋಗೀಶ್ ರಾವ್ ಏಳಿಂಜೆ, ನಿವೃತ್ತ ಶಿಕ್ಷಕ ಬಾಲಕೃಷ್ಣ ಉಡುಪ, ಅರ್ಚಕ ರಾಘವೇಂದ್ರ ಉಡುಪ, ಪು.ಗುರುಪ್ರಸಾದ್ ಭಟ್, ರಾಘವೇಂದ್ರ ಭಟ್ ಭವಿಷ್ಯ ನಿಧಿ ಇಲಾಖೆಯ ನಿವೃತ್ತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಯುಗಪುರುಷದ ಭುವನಾಭಿರಾಮ ಉಡುಪ ಸ್ವಾಗತಿಸಿದರು. ಬಳಿಕ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವದ ಅಂಗವಾಗಿ ಪಲ್ಲಕಿ ಉತ್ಸವ, ರಥೋತ್ಸವ ಜರಗಿತು.