ನೀರ್ಕೆರೆ ಸರಕಾರಿ ಶಾಲೆಗೆ ವಿಜ್ಞಾನ ಪ್ರಯೋಗಾಲಯದ ಕೊಡುಗೆ
Thursday, August 31, 2023
ಕಿನ್ನಿಗೋಳಿ:ನಿರ್ಕೇರೆ ಮೂಡಬಿದಿರೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ವ್ಯಾಪ್ತಿಯ ನೀರ್ಕೆರೆ ಸರಕಾರಿ ಪ್ರೌಢಶಾಲೆಗೆ ಸುಮಾರು ಮೂರುವರೆ ಲಕ್ಷ ದ ವಿಜ್ಞಾನ ಪ್ರಯೋಗಾಲಯ 'ಕಲ್ಪನಾ ಚಾವ್ಲಾ' ವನ್ನು ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಮುಚ್ಚೂರು ನೀರುಡೆ ವತಿಯಿಂದ ನೀಡಲಾಯಿತು. ತೆಂಕ ಮಿಜಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾಲಿನಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲ ಆಗುವಂತೆ ವಿಜ್ಞಾನ ಪ್ರಯೋಗಾಲಯ ನೀಡಿದ ಲಯನ್ಸ್ ಕ್ಲಬ್ ಮುಚ್ಚುರು ನೀರುಡೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಅಭಿನಂದಿಸಿದರು. ಲಯನ್ಸ್ ವಲಯಾಧ್ಯಕ್ಷೆ ಪ್ರತಿಭಾ ಹೆಬ್ಬಾರ್ ಮಾತನಾಡಿ ಗ್ರಾಮೀಣ ಪ್ರದೇಶದ ಜನರ ಕಷ್ಟ ಅರಿವಾಗುವುದು ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಮಾತ್ರ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಲಯನ್ಸ್ ಸಂಸ್ಥೆಗಳಲ್ಲಿ ಒಂದಾದ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಮುಚ್ಚೂರು ನೀರುಡೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ಗ್ರಾಮೀಣ ಪ್ರದೇಶದಲ್ಲಿ ಹೆಸರುವಾಸಿಯಾಗಿದೆ. ಇನ್ನು ಮುಂದೆಯೂ ಇವರ ಸೇವಾ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ಅಲ್ಲದೆ ವಿದ್ಯಾರ್ಥಿಗಳು ಈ ಪ್ರಯೋಗಾಲಯದ ಪ್ರಯೋಜನವನ್ನು ಪಡೆದು ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ವಿಜ್ಞಾನಿಗಳಾಗಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಮೂಡಬಿದ್ರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ ಬಿ ,ಲಯನ್ಸ್ ಜಿಲ್ಲಾ ಸಂಯೋಜಕ ವೆಂಕಟೇಶ ಹೆಬ್ಬಾರ್ ,ಅಜಿತ್ ಕುಮಾರ್ ಜೈನ್, ನಾರಾಯಣ ಪೈ ,ನವೀನ್ ಪುತ್ರನ್, ಶ್ರೀನಿವಾಸ್ ಗೌಡ, ಕರುಣಾಕರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.