-->


l ಸೆ. 1ರಿಂದ 3 ರ ತನಕ ಕಟೀಲಿನಲ್ಲಿ ನಂದಿನೀ ಗವ್ಯಮ್  ಗೋ ಉತ್ಪನ್ನಗಳ ಪ್ರದರ್ಶನ, ಮಾರಾಟ

l ಸೆ. 1ರಿಂದ 3 ರ ತನಕ ಕಟೀಲಿನಲ್ಲಿ ನಂದಿನೀ ಗವ್ಯಮ್ ಗೋ ಉತ್ಪನ್ನಗಳ ಪ್ರದರ್ಶನ, ಮಾರಾಟ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳದ ಆಶ್ರಯದಲ್ಲಿ ಸರಸ್ವತೀ ಸದನದಲ್ಲಿ ಸಪ್ಟಂಬರ್ ೧ರಿಂದ ೩ ತಾರೀಕಿನ ವರೆಗೆ ಗೋಉತ್ಪನ್ನಗಳ ಪ್ರದರ್ಶನ, ಮಾರಾಟ, ಜಾಗೃತಿ, ಮಾಹಿತಿ ಕಾರ್ಯಕ್ರಮ ನಂದಿನೀ ಗವ್ಯಮ್ ನಡೆಯಲಿದೆ.
ಬೆಂಗಳೂರು, ಮೈಸೂರು, ಧಾರವಾಡ, ಕೋಲಾರ, ಉಡುಪಿ ಹೀಗೆ ರಾಜ್ಯದ ನಾನಾ ಕಡೆಗಳಿಂದ ವಿವಿಧ ಗೋ ಉತ್ಪನ್ನಗಳ ತಯಾರಕರು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ. ಮಜ್ಜಿಗೆ, ತುಪ್ಪ ಅಲ್ಲದೆ, ಧೂಪ, ಲೋಬಾನ, ಗೋಮಯ, ಪೂಜಾ ಗೋಮೂತ್ರ ಇತ್ಯಾದಿ ಪೂಜಾ ಸಾಮಗ್ರಿಗಳು, ಅರ್ಕ, ಶಾಂಪೂ, ಮುಲಾಮು ತಲೆಗೆ ಹಾಕುವ ಎಣ್ಣೆ, ನೋವು ನಿವಾರಕ ಎಣ್ಣೆ, ದಂತಮಂಜನ-ಹಲ್ಲುಪುಡಿ, ಸ್ನಾನದ ಸಾಬೂನು, ಫೇಸ್ ಕ್ರೀಮ್ ಇತ್ಯಾದಿ ಆರೋಗ್ಯ ಸಂಬಂಧಿ ವಸ್ತುಗಳು, ಗೃಹೋಪಯೋಗಿ ಉತ್ಪನ್ನಗಳು, ಕೀಚೈನ್, ಜೀರ್ಣ ಚೂರ್ಣ, ಜೀವಾಮೃತ..ಇತ್ಯಾದಿ ಗೋಉತ್ಪನ್ನಗಳು, ಪಂಚಗವ್ಯ ಆರೋಗ್ಯ ಚಿಕಿತ್ಸೆ ಉತ್ಪನ್ನಗಳು, ದಿನನಿತ್ಯ ಉಪಯೋಗಿ ಪಂಚಗವ್ಯ ಉತ್ಪನ್ನಗಳು, ಕೃಷಿ ಪಂಚಗವ್ಯ ಉತ್ಪನ್ನಗಳು ಹೀಗೆ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಅಲ್ಲದೆ ಈ ಮೂರೂ ದಿನಗಳಲ್ಲಿ ಉಚಿತ ಪಂಚಗವ್ಯ ಚಿಕಿತ್ಸೆಯನ್ನೂ ನೀಡಲಾಗುತ್ತದೆ.
ಕಟೀಲು ಕ್ಷೇತ್ರದ ಪುರಾಣದಂತೆ ಕಾಮಧೇನುವಿನ ಮಗಳು ನಂದಿನೀ ನದಿಯಾಗಿ ಹರಿಯುತ್ತಿರುವ ಕ್ಷೇತ್ರವಿದು. ಇಲ್ಲಿನ ಆರಾಧ್ಯೆ ಭ್ರಾಮರಿಯು ನಿನ್ನ ಕಟಿಯಲ್ಲಿ ನಿನ್ನ ಮಗಳಾಗಿ ನೆಲೆಯಾಗುವೆ ಎಂದು ನಂದಿನಿಗೆ ಅಭಯವಿತ್ತ ಪ್ರಕಾರ ಅರುಣಾಸುರನ ಸಂಹಾರದ ಬಳಿಕ ಇಲ್ಲಿ ನೆಲೆಯಾದಳು. ಕಟೀಲು ದೇಗುಲದಲ್ಲಿ ಗೋಪೂಜೆಗೆ ವಿಶೇಷ ಮಹತ್ವವಿದೆ. ದಿನಂಪ್ರತಿ ಬೆಳಿಗ್ಗೆ ಗೋಪೂಜೆ ನಡೆಯುತ್ತದೆ. ದೇಗುಲವು ಎರಡು ಗೋಶಾಲೆಗಳನ್ನು ನಡೆಸುತ್ತಿದ್ದು, ಇನ್ನೂರಕ್ಕೂ ಹೆಚ್ಚು ಗೋವುಗಳಿವೆ. ವಾರ್ಷಿಕ ಸುಮಾರು ೫೦ಲಕ್ಷ ರೂ.ಗಳನ್ನು ಗೋಸಾಕಾಣಿಕೆಗೆ ದೇಗುಲವು ವ್ಯಯಿಸುತ್ತಿದೆ. ಇದೀಗ ಗೋಉತ್ಪನ್ನಗಳ ಬಗ್ಗೆ ಜನಜಾಗೃತಿಯಾಗಬೇಕು, ಉತ್ಪಾದಕರಿಗೆ ಮಾರುಕಟ್ಟೆ ಕಲ್ಪಿಸಿ ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಮೂರು ದಿನಗಳ ಪ್ರದರ್ಶನ ಮಾರಾಟ ಮೇಳವನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ. 

Ads on article

Advertise in articles 1

advertising articles 2

Advertise under the article