ಪೆರ್ಮುದೆ ಪ್ರಜಾಪ್ರತಿನಿಧಿ ಸಮಿತಿ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ
Wednesday, August 16, 2023
ಪೆರ್ಮುದೆ:ಪೆರ್ಮುದೆ ಪ್ರಜಾಪ್ರತಿನಿಧಿ ಸಮಿತಿ ವತಿಯಿಂದ ಪೆರ್ಮುದೆ ಪೇಟೆಯಲ್ಲಿರುವ ಕಾಂಗ್ರೆಸ್ ಸೇವಾ ಕೇಂದ್ರದ ಬಳಿ 77 ನೇ ಸ್ವಾಂತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ ಹಾಗೂ ವರ್ತಕ ಪಾವುಲ್ ಪಿಂಟೋ ಅವರು ಧ್ವಜಾರೋಹಣ ಗೈದರು.
ಪೆರ್ಮುದೆ ಗ್ರಾಮ ಪಂಚಾಯತ್ ಸದಸ್ಯ ವಸಂತ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯತ್ ಸದಸ್ಯೆ ಭವಾನಿ ಪೂಜಾರ್ತಿ , ಮಾಜಿ ಸದಸ್ಯ ಜಾರ್ಜ್ ಡಿಸೋಜ, ಮಾಜಿ ಸದಸ್ಯೆ ಅ್ಯಗ್ನೆಷ್ ಕನ್ಸಸ್ಸೋ, ಸಮಿತಿ ಸದಸ್ಯರಾದ ಭಾಸ್ಕರ್ ಭಂಡಾರಿ, ನವಾಜ್ , ಬೆಂಜಮಿನ್ ಪ್ರಕಾಶ್ ವಾಸ್, ಗ್ಲೆನ್ ಡಿಸೋಜ, ಮಹಮ್ಮದ್ ಗೌಸ್, ಈಶಾ ಪಟೇಲ್, ಅಬ್ದುಲ್ಲಾ, ಇರ್ಫಾನ್, ಅಲ್ತಾಫ್, ನವಾಜ್ , ಸಲಿಮ್ , ಫಿರೋಜ್, ಕಾಸಿಮ್ ಪಂಡಿತ್, ಸಗೀರ್ ಪಂಡಿತ್, ಬಶೀರ್ ಬಟ್ರಕೆರೆ, ಫೈಜಾನ್, ಪದ್ಮಾವತಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.