ಎಕ್ಕಾರು ಗ್ರಾ.ಪಂ ಅಧ್ಯಕ್ಷರಾಗಿ ಪ್ರವೀಣ್ ಆಚಾರ್ಯ,ಉಪಾಧ್ಯಕ್ಷರಾಗಿ ಶ್ರೀಮತಿ ಪದ್ಮಾಕ್ಷಿ ಅವಿರೋಧ ಆಯ್ಕೆ
Wednesday, August 16, 2023
ಎಕ್ಕಾರು :ಎಕ್ಕಾರು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಪ್ರವೀಣ್ ಆಚಾರ್ಯ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಮತಿ ಪದ್ಮಾಕ್ಷಿ ಆವಿರೋಧ ಆಯ್ಕೆಯಾಗಿದ್ದಾರೆ.
ಎಕ್ಕಾರು ಗ್ರಾಮ ಪಂಚಾಯತ್ ಗೆ ನೂತನಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಅಭಿನಂದಿಸಿದರು.
ತಾ.ಪಂ ಇ.ಓ ಮಹೇಶ್ ಕುಮಾರ್ ಹೊಳ್ಳ ಅವರು ಚುನಾವಣಾಧಿಕಾರಿಯಾಗಿದ್ದರು.ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಆಳ್ವ,ಪ್ರಧಾನ ಕಾರ್ಯದರ್ಶಿ ಕೇಶವ ಕರ್ಕೇರಾ,ಬಿಜೆಪಿ ಮುಖಂಡರಾದ
ಈಶ್ವರ್ ಕಟೀಲ್, ವಿನೋದ್ ಸಾಲ್ಯಾನ್ ,ಪಿಡಿಓ ವೆಂಕಟರಮಣ ಪ್ರಕಾಶ್, ಪ್ರಕಾಶ್ ಕುಕ್ಯಾನ್ ,ಸುರೇಶ್ ಶಟ್ಟಿ,ದಿನೇಶ್ ಕುಕ್ಯಾನ್ ,ಸುದೀಪ್ ಅಮೀನ್ ,ಸತೀಶ್ ಶೆಟ್ಟಿ,ವಿಕ್ರಮ್ ಮಾಡ ಹಾಗೂ ಮೊದಲಾದವರು ಉಪಸ್ಥಿತರಿದ್ದರು.