ಬಜಪೆ ಕರಾವಳಿ ಟೀಮ್ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ
Wednesday, August 16, 2023
ಬಜಪೆ:ಪೌರ ಕಾರ್ಮಿಕರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಸನ್ಮಾನಿಸುವ ಮೂಲಕ ಕರಾವಳಿ ಟೀಮ್ ವತಿಯಿಂದ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮವು ಬಜಪೆ ಜಂಕ್ಷನ್ ನಲ್ಲಿ ನಡೆಯಿತು. ಎಂ ದೇವದಾಸ್ ಅವರು ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದರು. ಐಟಿ ಸೆಲ್ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನಿಸಾರ್ ಕರಾವಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಹಿಸಿದರು.
ಕಾರ್ಯಕ್ರಮದಲ್ಲಿ ಸಿರಾಜ್ ಬಜ್ಪೆ ,ಶಿವರಾಂ ಪೂಜಾರಿ ,ಬಿ ಜೆ ರಹೀಮ್,ರಾಕೇಶ್ ಕುಂದರ್ ಉಮೇಶ್ ಶೆಟ್ಟಿ ,ಜೇಕಬ್ ಪಿರೇರಾ ಅಶ್ರಫ್ ಮಾಚಾರ್ ,ಜಲಾಲುದ್ದೀನ್ ಮರವೂರು ,ಮಂಜಪ್ಪ ಪುತ್ರನ್ ಹನೀಫ್ ಹಿಲ್ ಟಾಪ್ ,ನಜಿರ್ ಕಿನ್ನಿಪದವು ,ಖಾದರ್ ಏರ್ಪೋರ್ಟ್ ,ಎಂ ಕೆ ಅಶ್ರಫ್ ಹಕೀಮ್ ಪ್ಯಾರಾ ಮತ್ತು ಊರಿನ ಗಣ್ಯರು ಭಾಗವಹಿಸಿದರು.ಹಫೀಜ್ ಕೊಳಂಬೆ ಅವರು ಕಾರ್ಯಕ್ರಮ ನಿರ್ವಹಿಸಿದರು.