-->

ಮರಗಿಡಗಳು ಪರಿಸರವನ್ನು ಕಾಪಾಡುವ ವೈದ್ಯರಿದ್ದಂತೆ - ಲ. ಸುಧೀರ್ ಬಾಳಿಗಾ

ಮರಗಿಡಗಳು ಪರಿಸರವನ್ನು ಕಾಪಾಡುವ ವೈದ್ಯರಿದ್ದಂತೆ - ಲ. ಸುಧೀರ್ ಬಾಳಿಗಾ


ಮೂಲ್ಕಿ:ಇಲ್ಲಿನ ಕೆ.ಎಸ್.ರಾವ್ ನಗರದ ದಕ್ಷಿಣ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಾಯರ್ ಪ್ರಾಯೋಜಕತ್ವದಲ್ಲಿ  'ವನ ಮಹೋತ್ಸವ' ಕಾರ್ಯಕ್ರಮವು  ನಡೆಯಿತು. ಲಯನ್ ಸುಧೀರ್ ಬಾಳಿಗ  ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ  ಮರಗಿಡಗಳು ಪರಿಸರವನ್ನು ಕಾಪಾಡುವ ವೈದ್ಯರಿದ್ದಂತೆ ದಿನದ 24  ಘಂಟೆ ಆಮ್ಲಜನಕ ಪೂರೈಕೆಯೂ ಸೇರಿದಂತೆ ಪ್ರಕೃತಿಯ ಮಾಲಿನ್ಯ  ರೋಗ-ರುಜಿನಗಳನ್ನು ದೂರಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಮೂಡಬಿದ್ರಿ ವಿಭಾಗದ ಕಿನ್ನಿಗೋಳಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ನಾಗೇಶ್ ಬಿಲ್ಲವ ಅವರು ಕಾರ್ಯಕ್ರಮದಲ್ಲಿ  ಮಾತನಾಡಿ ಲಯನ್ ಇನ್ಸ್ಪಾಯರ್ ನಂತಹ ಸಂಸ್ಥೆಗಳು ಪರಿಸರದ ಬಗೆಗಿನ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂತಸದ ವಿಚಾರ.ಮಕ್ಕಳಲ್ಲಿ ಪರಿಸರದ ಬಗೆಗೆ ಪ್ರೀತಿ, ಆಸಕ್ತಿಯನ್ನು ಮೂಡಿಸುವಲ್ಲಿ ಸಹಕಾರಿ, ಅದಲ್ಲದೇ ಈ ನಿಟ್ಟಿನಲ್ಲಿ ಗಿಡಮರ ಬೆಳೆಯುವವರಿಗೆ ಅತೀಕಡಿಮೆ ದರದಲ್ಲಿ ಸಸಿಗಳ ಪೂರೈಕೆ, ಪ್ರೋತ್ಸಾಹ ಧನ ಮತ್ತಿತರ ಸವಲತ್ತುಗಳನ್ನು ಅರಣ್ಯ ಇಲಾಖೆಯು ಕೊಡಮಾಡುತ್ತಿದೆ ಎಂದರು. ಲಯನ್ಸ್ ಕ್ಲಬ್ ಬಪ್ಪನಾಡು   ಇನ್ಸ್ಪಾಯರ್ ಸ್ಥಾಪಕಾಧ್ಯಕ್ಷ ಲಯನ್ ವೆಂಕಟೇಶ್ ಹೆಬ್ಬಾರ್ ಅವರು  ತಮ್ಮ ಮನೆಯಲ್ಲಿ ಗಿಡ ಬೆಳೆಸಲು ಆಸಕ್ತಿಯಿರುವ ಮಕ್ಕಳಿಗೆ ಉಚಿತವಾಗಿ  ಗಿಡಗಳನ್ನು ಕೊಡುವುದಲ್ಲದೇ, ವರ್ಷದ ಬಳಿಕ ತಾವು ಬೆಳೆಸಿದ ಆ ಗಿಡದ ಜೊತೆಗೆ ಮಕ್ಕಳು ಫೋಟೋ ಕಳುಹಿಸಿದರೆ ಬಹುಮಾನವನ್ನೂ ಕ್ಲಬ್ ಕೊಡಲಿದೆ ಎಂದರು.

ಲಯನ್ಸ್ ಕ್ಲಬ್ ಬಪ್ಪನಾಡು   ಇನ್ಸ್ಪಾಯರ್ ಕಾರ್ಯದರ್ಶಿ ಲಯನ್ ಪುಷ್ಪರಾಜ್ ಚೌಟ, ವಲಯಾಧ್ಯಕ್ಷೆ ಲಯನ್ ಪ್ರತಿಭಾ ಹೆಬ್ಬಾರ್, ಮೂಲ್ಕಿ ನಗರ ಸಭಾಸದಸ್ಯ ಲಯನ್ ಬಾಲಚಂದ್ರ ಕಾಮತ್, ಬೀಟ್ ಫಾರೆಸ್ಟ್ ಆಫೀಸರ್ ಸಂತೋಷ್ ಬೈಂದೂರು, ಪ್ರೌಢ ಶಾಲಾ ಮುಖ್ಯೋಪಧ್ಯಾಯ  ದಿನೇಶ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಹೆಗಡೆ, ಎಸ್.ಡಿ.ಎಮ್.ಸಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ವೇದಿಕೆಯಲ್ಲಿದ್ದರು.

ಕಾರ್ಯಕ್ರಮವನ್ನು ಸಹಶಿಕ್ಷಕಿ ಶ್ರೀಮತಿ ಶ್ರೀದೇವಿಯವರು ನಿರೂಪಿಸಿದರು. ಲಯನ್ ಭಾಸ್ಕರ ಕಾಂಚನ್, ಲಯನ್ ವಿಶ್ವನಾಥ ಶೆಣೈ ಹಾಗೂ ಸಹಶಿಕ್ಷಕರ ಸಹಕರಿಸಿದ್ದರು. ಶಾಲಾವಠಾರದಲ್ಲಿ ಸಾಗುವಾನಿ/ತೇಗದ ಸಸಿಗಳನ್ನು ನೆಟ್ಟು ನೀರೆರಲಾಯಿತು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807