ಮಕ್ಕಳಲ್ಲಿ ಪರಿಸರ ಕಾಳಜಿಯ ಅರಿವು -ಮೂಡಿಸಬೇಕು - ಪೃಥ್ವಿರಾಜ್ ಬಲ್ಲಾಳ್
Thursday, August 10, 2023
ಮೂಲ್ಕಿ :ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಯರ್ ವತಿಯಿಂದ ಆ.5 ರಂದು ಬೆಳ್ಮಣ್ಣು ಸಮೀಪದ ನಂದಳಿಕೆ ಮಂಜರಪಲ್ಕೆಯಲ್ಲಿನ ವಿದ್ಯಾಭೋಧಿನಿ ಅನುದಾನಿತ ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ 'ನಾಯಕತ್ವ ಗುಣ' ಬೆಳೆಸಿಕೊಳ್ಳುವ ಬಗ್ಗೆ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಪೃಥ್ವಿರಾಜ್ ಬಲ್ಲಾಳ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಲ್ಲಿ ಪರಿಸರ ಕಾಳಜಿಯ ಅರಿವು ಮೂಡಿಸಿದರು. ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಯರ್ ನ ಅಧ್ಯಕ್ಷ ಲಯನ್ ಸುಧೀರ್ ಎನ್ ಬಾಳಿಗ ಅವರು ಗಿಡಮರಗಳಿಂದಾಗುವಂತಹ ಪ್ರಯೋಜನಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಲಯನ್ ಪ್ರಣೀತ್ ಕುಮಾರ್ ಅವರು ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಆತ್ಮವಿಶ್ವಾಸ, ಕಲಿಕೆಯಲ್ಲಿ ಆಸಕ್ತಿ, ನಾಯಕತ್ವ ಗುಣ ಬೆಳೆಸಿಕೊಳ್ಳುವ ಕುರಿತು ಸಂವಾದ ನಡೆಸಿಕೊಟ್ಟರು. ತರಗತಿ ನಾಯಕರುಗಳಾದ ಕು. ಪ್ರಾರ್ಥನ ಹಾಗೂ ಮಾ. ಪ್ರಸಾದ್ ಅವರು ಸಂವಾದದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ನಿವೃತ್ತ ಮುಖ್ಯೋಪಾಧ್ಯಾಯ Rtn. ಎನ್ ತುಕಾರಾಮ್ ಶೆಟ್ಟಿ ಅವರು ಲಯನ್ಸ್ ಕ್ಲಬ್ ಇನ್ಸ್ಪಯರ್ ನ ಸಮಾಜಮುಖಿ, ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಶಾಲಾ ವಠಾರದಲ್ಲಿ ಗಿಡನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳಿಗೆ ಇಪ್ಪತ್ತಕ್ಕೂ ಹೆಚ್ಚು ಗಿಡಗಳನ್ನು ವಿತರಿಸಿ, ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಬಪ್ಪನಾಡು ಇನ್ಪಯರ್ ನ ಸ್ಥಾಪಕಾಧ್ಯಕ್ಷ ಲಯನ್ ವೆಂಕಟೇಶ ಹೆಬ್ಬಾರ್ ಹಾಗೂ ವಲಯಾಧ್ಯಕ್ಷ ಪ್ರತಿಭಾ ಹೆಬ್ಬಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜನೆಯನ್ನು ಲಯನ್ ವೈಶಾಖ್ ಹೆಬ್ಬಾರ್ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಕಾರ್ಯದರ್ಶಿಯಾದ ಲಯನ್ ಪುಷ್ಪರಾಜ್ ಚೌಟ ವಹಿಸಿದ್ದರು.