ಪಟ್ಲ ಫೌಂಡೇಶನಿನ ನೂತನ ಯೋಜನೆ ಯಕ್ಷಧ್ರುವ ಯಕ್ಷ ಶಿಕ್ಷಣ ಕಾರ್ಯಕ್ರಮಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಇವರಿಂದ ಚಾಲನೆ
Thursday, August 3, 2023
ಈ ಯಕ್ಷಗಾನ ಕಲೆಯಲ್ಲಿ ಲಯಬದ್ದವಾದ ಹಾಡುಗಾರಿಕೆ ವೇಷಗಾರಿಕೆಯಲ್ಲಿ ನೃತ್ಯ, ಸ್ಪಷ್ಟ ಉಚ್ಚಾರದ ಮಾತುಗಾರಿಕೆ ಹಾಗೂ ದೈಹಿಕ ವ್ಯಾಯಾಮವು ಒಳಗೊಂಡಿದೆಯೆಂದು ಶಾಸಕ ಉಮನಾಥ ಕೋಟ್ಯಾನ್ ಅವರು ಹೇಳಿದರು.ಕಿನ್ನಿಗೋಳಿ ಸಮೀಪದ ಕಮ್ಮಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಯಕ್ಷ ಶಿಕ್ಷಣ ಉಧ್ಘಾಟನಾ ಸಮಾರಂಭದಲ್ಲಿ ಹೇಳಿದರು.
ಯಕ್ಷಗಾನ ಕಲಿಯಲು ನಾವು ತರಗತಿಗತಿಗಳನ್ನು ಹುಡುಕಿಕೊಂಡು ಹೋಗುವ ಪ್ರಸ್ತುತ ಸನ್ನಿವೇಶದಲ್ಲಿ ಶಾಲೆಗಳಿಗೆ ಬಂದು ಯಕ್ಷಗಾನವನ್ನು ಕಲಿಸಲು ಮುಂದೆ ಬಂದಿರುವ ಪಟ್ಲ ಸತೀಶ್ ಶೆಟ್ಟಿಯವರನ್ನು ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ ನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಷಿ , ಎಂ.ಎಲ್ ಸಾಮಗ. ಯಕ್ಷ ಶಿಕ್ಷಣದ ರೂವಾರಿ ಹಾಗೂ ಸಂಚಾಲಕ ಪಣಂಬೂರು ವಾಸು ಐತಾಳ್, ಯುಗಪುರುಷದ ಭುವನಾಭಿರಾಮ ಉಡುಪ , ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್, ಪಟ್ಲ ಫೌಂಡೇಶನಿನ ಪಟ್ಲ ಸತೀಶ್ ಶೆಟ್ಟಿ ಪುರುಷೋತ್ತಮ ಭಂಡಾರಿ , ಸಿಎ ಸುದೇಶ್ ಕುಮಾರ್ ರೈ ಶಾಲೆಯ ಪ್ರಾಂಶುಪಾಲ ಪುಟ್ಟಸ್ವಾಮಿ ಉಪಸ್ಥಿತರಿದ್ದರು.