ಕಿನ್ನಿಗೋಳಿ ಯಕ್ಷಲಹರಿ-ಯುಗಪುರುಷ ಸಂಯೋಜನೆಯೊಂದಿಗೆ 33ನೇ ವರ್ಷದ ತಾಳಮದ್ದಳೆ ಸಪ್ತಾಹ 2023"ಚರಿತಂ ಮಹಾತ್ಮನಃ" ಗೆ ಯುಗಪುರುಷ ಸಭಾಭವನದಲ್ಲಿ ಚಾಲನೆ
Wednesday, August 2, 2023
"ಚರಿತಂ ಮಹಾತ್ಮನಃ" ಗೆ ಯುಗಪುರುಷ ಸಭಾಭವನದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಕಟೀಲು ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ದೀಪ ಬೆಳಗಿಸಿ ಆಶೀರ್ವಚನ ನೀಡಿದರು
ಕಾರ್ಯಕಮದ
ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜೀ ಅಧ್ಯಕ್ಷ ಡಾಕ್ಟರ್ ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ಕಲೆಗೆ ಪ್ರೋತ್ಸಾಹ ನೀಡಿ ಯಕ್ಷಗಾನ ಕಲಾವಿದರನ್ನು ಗುರುತಿಸಿ ಗೌರವಿಸುವ ಸಂಸ್ಥೆಯ ಕಾರ್ಯ ಅಭಿನಂದನೀಯ
ಮುಖ್ಯ ಅತಿಥಿಗಳಾಗಿ ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರೆ,
ಪೃಥ್ವಿರಾಜ ಆಚಾರ್ಯಕಿನ್ನಿಗೋಳಿ,ಕೆನರಾ ಬ್ಯಾಂಕ್ ಶಾಖಾ ಪ್ರಬಂಧಕ ಜಿಮ್ನ ಪಿವಿ, ಕಿನ್ನಿಗೋಳಿ , ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ,ಉಪಾಧ್ಯಕ್ಷ ಪಶುಪತಿ ಶಾಸ್ತ್ರಿವಿನಯ ಆಚಾರ್,ದೀಪ್ತಿ ಬಾಲಕೃಷ್ಣ ಭಟ್
ಉಪಸ್ಥಿತರಿದ್ದರು.ಪತ್ರಕರ್ತ ಶರತ್ ಶೆಟ್ಟಿ ಯವರು ಯಕ್ಷಲಹರಿಯ ಸ್ಥಾಪಕ ಅಧ್ಯಕ್ಷ ಇ.ಶ್ರೀನಿವಾಸ ಭಟ್ ಸಂಸ್ಮರಣಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸಾಧಕ ಕಲಾವಿದರ ನೆಲೆಯಲ್ಲಿ ಸರಪಾಡಿ ಶಂಕರನಾರಾಯಣ ಕಾರಂತರನ್ನು ಗೌರವಿಸಲಾಯಿತು. ಬಳಿಕ ಧ್ರುವ ಚರಿತ್ರೆ ಯಕ್ಷಗಾನ ತಾಳಮದ್ದಳೆ ನಡೆಯಿತು