ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಚಿಕ್ಕಮೇಳದ ಮಳೆಗಾಲದ ತಿರುಗಾಟ ಆರಂಭ
Thursday, July 20, 2023
ಮೂಲ್ಕಿ:ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಚಿಕ್ಕಮೇಳದ ಮಳೆಗಾಲದ ತಿರುಗಾಟ ಆರಂಭಗೊಂಡಿದೆ.
ಭಾಗವತಿಕೆಯಲ್ಲಿ ಸತೀಶ್ ಭಟ್ ಕಿನ್ನಿಗೋಳಿ, ಮದ್ದಲೆ ವಿಕಾಸ್ ಕಾರ್ಕಳ, ಚೆಂಡೆ ರೋಹಿತ್ ಉಚ್ಚಿಲ, ಚಕ್ರತಾಳ ಚಂದ್ರಹಾಸ, ಪುಂಡು ವೇಷದಲ್ಲಿ ಪ್ರಸಾದ್ ಸವಣೂರು, ಸ್ತ್ರೀ ವೇಷದಲ್ಲಿ ಪರಮೇಶ್ವರ ಗಂಗನಾಡು, ಮೇಳದ ಮ್ಯಾನೇಜರ್ ಭವಾನಿ ಶಂಕರ ಶೆಟ್ಟಿ, ವ್ಯವಸ್ಥಾಪಕ ವಿನೋದ್ ಕುಮಾರ್ ಬಜ್ಜೆ ಅವರು ಬಪ್ಪನಾಡು ಚಿಕ್ಕಮೇಳದ ರೂವಾರಿಗಳಾಗಿದ್ದಾರೆ.