ಗುರುಪುರ :ಗಾಳಿ ಮಳೆಗೆ ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ನಿರಂತರ ಏರುತ್ತಿದ್ದು, ಗುರುಪುರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ಕುಕ್ಕುದಕಟ್ಟೆ, ಕಾರಮೊಗರು, ದೋಣಿಂಜೆ ಮೊದಲಾದ ತಗ್ಗು ಪ್ರದೇಶದಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ನದಿ ಪಾತ್ರದಲ್ಲಿ ತೋಟಗಳಿಗೆ ನೀರು ಬಿದ್ದಿದ್ದು ಮನೆಗಳಿಗೆ ಅಪಾಯ ಕಾದಿದೆ.