-->

ಯುವವಾಹಿನಿ ಘಟಕದ ಆಶ್ರಯದಲ್ಲಿ 21 ನೇ ವರ್ಷದ ಆಟಿದೊಂಜಿ ದಿನ  ಕಾರ್ಯಕ್ರಮ

ಯುವವಾಹಿನಿ ಘಟಕದ ಆಶ್ರಯದಲ್ಲಿ 21 ನೇ ವರ್ಷದ ಆಟಿದೊಂಜಿ ದಿನ ಕಾರ್ಯಕ್ರಮ

ಮೂಲ್ಕಿ :ಯುವವಾಹಿನಿ ಘಟಕದ ಆಶ್ರಯದಲ್ಲಿ 21 ನೇ ವರ್ಷದ ಆಟಿದೊಂಜಿ ದಿನ  ಕಾರ್ಯಕ್ರಮವು ಮೂಲ್ಕಿಯ ಬಿಲ್ಲವ ಸಂಘದಲ್ಲಿ ಭಾನುವಾರದಂದು ನಡೆಯಿತು.ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ  ಮಾಧವ ಪೂಜಾರಿ ಕಿಲ್ಪಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ತುಳು ಚಿತ್ರರಂಗದ ಕಲಾವಿದ ಭೋಜರಾಜ್ ವಾಮಂಜೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಈ ವೇಳೆ ಅವರು ತುಳು ಪದ್ಯವೊಂದನ್ನು ಹಾಡಿ ನೆರೆದಿದ್ದ ಎಲ್ಲರನ್ನು ಮನರಂಜಿಸಿದರು.ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಗ್ನೇಸ್ ಕಾಲೇಜಿನ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಉಪನ್ಯಾಸ ನೀಡಿದರು.
ತುಳು ಚಿತ್ರನಿರ್ಮಾಪಕ ಸಂದೇಶ್ ರಾಜ್ ಬಂಗೇರ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮಕ್ಕೆ ಬಂದಂತಹ ಅತಿಥಿಗಳಿಗೆ ಬೆಳಿಗ್ಗೆ ಅರೆಪುದ ಅಡ್ಯೆ ಹಾಗೂ ಚಾಹ,ಕಡ್ಲೆ ಹಾಗೂ ಹಪ್ಪಳ  ವನ್ನು ನೀಡಲಾಯಿತು.ಮಧ್ಯಾಹ್ನದ ಆಟಿದ ಅಟಿಲ್ ನಲ್ಲಿ ಕುಕ್ಕುದ ಉಪ್ಪಡ್, ತಿಮರೆದ ಚಟ್ನಿ,ತೊಜಂಕ್ ನುರ್ಗೆ ತೊಪ್ಪು,ತೇವು ತೇಟ್ಲ,ಕುಡುತ್ತ ಸಾರ್,ತೇವು ಪದ್ಪೆ,ಪೆಲಕಾಯಿದ  ಗಟ್ಟಿ,ಉಪ್ಪಡ್ ಪಚ್ಚಿರ್,ಮೆತ್ತೆದ ಗಂಜಿ ಮುಂತಾದ ತಿನಿಸುಗಳನ್ನು ಕಾರ್ಯಕ್ರಮಕ್ಕೆ ಬಂದಂತಹ ಅತಿಥಿ ಅಭ್ಯಾಗತರಿಗೆ ಉಣ ಬಡಿಸಲಾಯಿತು.
ಆಟಿದೊಂಜಿ ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807