-->

ಜ್ಞಾನದ ಜ್ವಾಲೆಯು ಅಜ್ಞಾನದ ಕತ್ತಲೆಯನ್ನ ದೂರ ಮಾಡಿ ವಿದ್ಯೆಯ ಮೂಲಕ ಸುಜ್ಞಾನವನ್ನು ಮೂಡಿಸುತ್ತದೆ - ಹರಿಕೃಷ್ಣ ಪುನರೂರು

ಜ್ಞಾನದ ಜ್ವಾಲೆಯು ಅಜ್ಞಾನದ ಕತ್ತಲೆಯನ್ನ ದೂರ ಮಾಡಿ ವಿದ್ಯೆಯ ಮೂಲಕ ಸುಜ್ಞಾನವನ್ನು ಮೂಡಿಸುತ್ತದೆ - ಹರಿಕೃಷ್ಣ ಪುನರೂರು ಕಿನ್ನಿಗೋಳಿ:ಜ್ಞಾನದ ಜ್ವಾಲೆಯು ಅಜ್ಞಾನದ ಕತ್ತಲೆಯನ್ನ ದೂರ ಮಾಡಿ ವಿದ್ಯೆಯ ಮೂಲಕ ಸುಜ್ಞಾನವನ್ನು ಮೂಡಿಸುತ್ತದೆ. ದೀಪದಿಂದ ಹೊರಹೊಮ್ಮುವ ಬೆಳಕಿನ ಕಿರಣಗಳು ಹಲವಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಲು ದಾರಿಯನ್ನು ಸೂಚಿಸುವ  ಸಂಕೇತವಾಗಿದೆ, ಆದ್ದರಿಂದ ನಮ್ಮ ಶಾಲೆಯ ಧ್ಯೇಯವಾಕ್ಯ, - "ತಮಸೋಮಾ ಜ್ಯೋತಿರ್ಗಮಯ" ಎಂದು ಶ್ರೀ ಶಾರದಾ ಸೊಸೈಟಿಯ ಅಧ್ಯಕ್ಷ  ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು   ಹೇಳಿದರು.
ಅವರು  ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನಲ್ಲಿ  ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಆಡಳಿತ ಮಂಡಳಿ ನಡೆಸಿದ್ದು ಅದರ ಭಾಗವಾಗಿ,  ವಿನೂತನ ಶಾಲಾ ಲಾಂಛನವನ್ನು ಬಿಡುಗಡೆ ಮಾಡಿ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಸೊಸೈಟಿಯ ಕಾರ್ಯದರ್ಶಿ ಪುರಂದರ ಶೆಟ್ಟಿಗಾರ್, ಕೋಶಾಧಿಕಾರಿ ಭುವನಾಭಿರಾಮ ಉಡುಪ, ನಿರ್ದೇಶಕರುಗಳಾದ ಪಟೇಲ್ ವಾಸುದೇವ ರಾವ್, ಪಿ.ಎಸ್. ಸುರೇಶ್ ರಾವ್, ಪಟೇಲ್ ವಿಶ್ವನಾಥ್ ರಾವ್ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ  ದೇವಪ್ರಸಾದ್ ಪುನರೂರು ಸ್ವಾಗತಿಸಿದರು, ಶಾಲಾ ಪ್ರಾಂಶುಪಾಲ ಜಿತೇಂದ್ರ ವಿ ರಾವ್  ವಂದಿಸಿದರು, ಸಹ ಶಿಕ್ಷಕಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807