ವಿಜಯ ಯುವ ಸಂಗಮದ ಅಧ್ಯಕ್ಷರಾಗಿ ವಿನೋದ್ ಶೆಟ್ಟಿ ಸಂಕೇಶ ಆಯ್ಕೆ
Thursday, June 8, 2023
ಬಜಪೆ:ಜಿಲ್ಲಾ ರಾಜ್ಯೋತ್ಸವ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ವಿಜಯ ಯುವ ಸಂಗಮ (ರಿ.) ಎಕ್ಕಾರು ಇದರ ವಾರ್ಷಿಕ ಮಹಾ ಸಭೆಯು ನಡೆಯಿತು.ಸಭೆಯಲ್ಲಿ ವಾರ್ಷಿಕ ಲೆಕ್ಕ ಪತ್ರ ಮಂಡನೆ,ಮುಂದಿನ ಸಾಲಿನ ಕಾರ್ಯಯೋಜನೆಗಳ ಕ್ರೀಯಾ ಪಟ್ಟಿ ರಚನೆ ಹಾಗೂ 27 ನೇ ವರ್ಷದ ನೂತನ ಸಮಿತಿ ಮತ್ತು ಪದಾಧಿಕಾರಿಗಳ ಆಯ್ಕೆ ಯು ನಡೆಯಿತು.ನೂತನ ಅಧ್ಯಕ್ಷರಾಗಿ ವಿನೋದ್ ಶೆಟ್ಟಿ ಸಂಕೇಶ ಅವರು ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ರತ್ನಾಕರ ಶೆಟ್ಟಿ ಬಾಳಿಕೆ ಮನೆ,ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ,ಉಪಾಧ್ಯಕ್ಷ ರಂಜಿತ್ ಶೆಟ್ಟಿ,ಪ್ರ. ಕಾರ್ಯದರ್ಶಿ ಪ್ರವೀಣ್ ಕೆ. ಎಮ್,ಜೊತೆ ಪ್ರ. ಕಾರ್ಯದರ್ಶಿ ರೋಯಲ್ ಮಿಸ್ಕಿತ್,ಕೋಶಾಧಿಕಾರಿ ಪವನ್ ಶೆಟ್ಟಿ,ಜೊತೆ ಕೋಶಾಧಿಕಾರಿ ಆದಿತ್ಯ ಶೆಟ್ಟಿ ಮಾಡರಮನೆ,ಕ್ರೀಡಾ ಕಾರ್ಯದರ್ಶಿ ಪ್ರಶಾಂತ್ ಮಾಡ,ಕ್ರೀಡಾ ಕಪ್ತಾನ ಉದಯ್ ಶೆಟ್ಟಿ ಸಂಕೇಶ.
ಜೊತೆ ಕ್ರೀಡಾ ಕಪ್ತಾನ ಅವಿನಾಶ್ ಆಚಾರ್ಯ,
ಸಾಂಸ್ಕೃತಿಕ ಕಾರ್ಯದರ್ಶಿ ಕಿಶೋರ್ ಪೂಜಾರಿ,ಸಂಘಟನಾ ಕಾರ್ಯದರ್ಶಿ ಮನೀಶ್ ಶೆಟ್ಟಿ ಅವರುಗಳು ಆಯ್ಕೆಯಾದರು.
ಈ ಸಂದರ್ಭ ಬಡಕರೆ ಶ್ರೀಜಾರಂದಾಯ ದೈವಸ್ಥಾನದಲ್ಲಿ ಸಂಸ್ಥೆಯ ವಾರ್ಷಿಕ ಹೋಮ ಪಂಚಕಜ್ಜಾಯ ಸೇವೆಯೂ ನೆರವೇರಿತು.