-->

ಕಿನ್ನಿಗೋಳಿಯ ಜೆ.ಬಿ ಫ್ರೆಂಡ್ಸ್ ನ ಆಶ್ರಯದಲ್ಲಿ  ಶ್ರಮದಾನ

ಕಿನ್ನಿಗೋಳಿಯ ಜೆ.ಬಿ ಫ್ರೆಂಡ್ಸ್ ನ ಆಶ್ರಯದಲ್ಲಿ ಶ್ರಮದಾನ

ಕಿನ್ನಿಗೋಳಿ:  ಕಿನ್ನಿಗೋಳಿ ಯಿಂದ ಗೋಳಿಜೋರ ಕ್ಕೆ ಸಾಗುವಂತಹ ಕಾಂಕ್ರಿಟ್ ರಸ್ತೆಯ  ಅಲ್ಲಲ್ಲಿ ಬಿರುಕು ಉಂಟಾಗಿದ್ದು, ಬಿರುಕುನಿಂದಾಗಿ  ರಸ್ತೆಯಲ್ಲಿ ದಿನಂಪ್ರತಿ ಸಂಚರಿಸುವಂತಹ ವಾಹನ ಸವಾರರಿಗೆ ಸಮಸ್ಯೆಯಾಗಿತ್ತು.ಅಲ್ಲದೆ ಕಾಂಕ್ರಿಟ್ ರಸ್ತೆಯಲ್ಲಿನ ಬಿರುಕಿನಿಂದಾಗಿ   ಬೈಕ್ ಸವಾರರೊಬ್ಬರು ಬಿದ್ದು ಗಾಯಗೊಂಡ ಘಟನೆಯು ನಡೆದಿತ್ತು.ಸಮಸ್ಯೆಯನ್ನು ಅರಿತ ಕಿನ್ನಿಗೋಳಿಯು ಜೆ.ಬಿ ಫ್ರೆಂಡ್ಸ್ ನ ಸರ್ವಸದಸ್ಯರುಗಳು  ಸೇರಿ ಬಿರುಕು ಬಿಟ್ಟ ಕಾಂಕ್ರಿಟ್ ರಸ್ತೆಯ ಅಲ್ಲಲ್ಲಿ ಡಾಂಬರಿನಿಂದ ಪ್ಯಾಚ್ ವರ್ಕ್ ಮಾಡಿದರು. ಜೆ.ಬಿ ಫ್ತೆಂಡ್ಸ್ ನ ಗೌರವಾಧ್ಯಕ್ಷ  ವಿನ್ಸೆಂಟ್  ಡಿಕೋಸ್ಟ, ಅಧ್ಯಕ್ಷ ಸಂತೋಷ್ ಶೆಟ್ಟಿ  ಪುನರೂರು.. ಕಾರ್ಯದರ್ಶಿ ನಿಶಾನ್ ಕ್ವಾಡ್ರಸ್,ಸದಸ್ಯರಾದ ಗೋಪಾಲ್ ಜೋಡ್ಬೈಲ್, ಮನಿಷ್ ಕುಲಾಲ್,     ರಾನ್ಸನ್,ರೋಲ್ಪಿ,ಗೌತಮ್,ಉದಯಕುಮಾರ್,ನವಾಜ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807