ಉರುಳಿಗೆ ಬಿದ್ದು ಚಿರತೆ ಸಾವು
Tuesday, June 6, 2023
ಕಿನ್ನಿಗೋಳಿ:ಚಿರತೆಯೊಂದು ಉರುಳಿಗೆ ಬಿದ್ದು ಒದ್ದಾಡಿ ಸಾವನ್ನಪ್ಪಿದ ಘಟನೆ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಮಿತ್ತಬೆಟ್ಟು ಬಳಿಯ ಗುಡ್ಡೆಯಲ್ಲಿ ನಡೆದಿದೆ.
ಕಾಡು ಪ್ರಾಣಿಗಳ ಹಾವಳಿ ತಡೆಯಲಾಗದೆ ಸ್ಥಳೀಯರು ಮಿತ್ತಬೆಟ್ಟು ಬಳಿಯ ಗುಡ್ಡದಲ್ಲಿ ಉರುಳನ್ನು ಇಟ್ಟಿದ್ದು,ಸ್ಥಳೀಯರು ಇಟ್ಟಂತಹ ಉರುಳಿಗೆ ಚಿರತೆ ರಾತ್ರಿ ಹೊತ್ತು ಬಿದ್ದಿದೆ ಎನ್ನಲಾಗಿದೆ.
ಬೆಳಗ್ಗೆ ಗುಡ್ಡೆಯ ಸಮೀಪ ನಾಯಿ ಬೊಗಳುವ ಶಬ್ದ ಕೇಳಿ ಸ್ಥಳೀಯರು ಭಯಭೀತರಾಗಿದ್ದು, ಸ್ಧಳೀಯರು ಬಂದು ನೋಡಿದಾಗ ಉರುಳಿಗೆ ಚಿರತೆ ಬಿದ್ದು ಒದ್ದಾಡುತ್ತಿರುವುದು ಕಂಡು ಬಂದಿದೆ.ಕೂಡಲೇ ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಶೆಟ್ಟಿ ಹಾಗೂ ಸ್ಧಳೀಯರು ಸೇರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಮುನ್ನವೇ ಚಿರತೆ ಉರುಳಿಗೆ ಸಿಕ್ಕಿ ಒದ್ದಾಡಿ ಪ್ರಾಣ ಬಿಟ್ಟದೆ ಎನ್ನಲಾಗಿದೆ.
ಸ್ಧಳಕ್ಕೆ ಐಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಚೌಟ.ಮೂಡಬಿದಿರೆ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ.ಎಸಿಎಫ್ ಸತೀಶ್.ಕಿನ್ನಿಗೋಳಿ ಬೀಟ್ ಫಾರೇಸ್ಟರ್ ರಾಜು ಎಲ್ ಜೆ.ಡಿ ಆರ್ ಎಫ್ ನಾಗೇಶ್ ಬಿಲ್ಲವ.ಬೀಟ್ ಫಾರೇಸ್ಟರ್ ಸಂತೋಷ್ ಮತ್ತಿತರರು ಭೇಟಿ ನೀಡಿ ಪರಶೀಲಿಸಿದ್ದು ಚಿರತೆಯ ಶವವನ್ನು ಮಹಜರು ನಡೆಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.