-->

ಗಾಂಜಾ ಸೇವನೆ ಮಾಡುತಿದ್ದ ಇಬ್ಬರ ಬಂಧನ

ಗಾಂಜಾ ಸೇವನೆ ಮಾಡುತಿದ್ದ ಇಬ್ಬರ ಬಂಧನ

ಬಜಪೆ :ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಕಂಬ್ಲ,ಮತ್ತು ಪೊರ್ಕೋಡಿ ದ್ವಾರದ ಬಳಿ  ಗಾಂಜಾ ಸೇವನೆ ಮಾಡುತಿದ್ದ ಇಬ್ಬರು ವ್ಯಕ್ತಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು 
ಅಂಬೇಡ್ಕರ್ ನಗರ ಪೊರ್ಕೋಡಿ  ಕೆಂಜಾರು ಗ್ರಾಮದ ನಿವಾಸಿಗಳಾದ  ಆತೀಕ್ ರೆಹಮಾನ್ (24 ) ಹಾಗೂ ಫಾಜೀಲ್( 25 ) ಎಂದು ಗುರುತಿಸಲಾಗಿದೆ.
ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಯಲ್ಲಿ ಗಾಂಜಾಸೇವನೆ ಮಾಡಿದ ಬಗ್ಗೆ ದೃಡಪಟ್ಟ ಮೇರೆಗೆ  ಪ್ರಕರಣ ದಾಖಲಾಗಿದೆ.
 
 ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ  ಕುಲದೀಪ್ ಕುಮಾರ್ ಜೈನ್ IPS ರವರ ಮಾರ್ಗದರ್ಶನದಂತೆ, DCP  ಅಂಶು ಕುಮಾರ್ (ಕಾ&ಸು) ಮತ್ತು  ದಿನೇಶ್ ಕುಮಾರ (ಅ & ಸಂ) ರವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀ ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್ ರವರು ಹಾಗೂ  PSI, ಗುರು ಕಾಂತಿ ರವರ ನೇತೃತ್ವದಲ್ಲಿ, ಬಜಪೆ ಠಾಣೆಯ ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807