ಮಳೆ,ಗ್ರಾಮದ ಸುಭೀಕ್ಷೆಗಾಗಿ ಎಕ್ಕಾರಿನಿಂದ ಕಟೀಲಿಗೆ ಪಾದಯಾತ್ರೆ
Tuesday, May 30, 2023
ಬಜಪೆ:ಸಕಾಲದಲ್ಲಿ ಮಳೆಯಾಗುವಂತೆ ಹಾಗೂ ಗ್ರಾಮವನ್ನು ಸುಭೀಕ್ಷೆಯಿಂದ ಪೊರೆಯುವಂತೆ ಪ್ರಾರ್ಥಿಸಿ ಆದಿತ್ಯವಾರ ಸಂಜೆ ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ದ್ವಾರದ ಬಳಿ ಎಕ್ಕಾರು ಗ್ರಾಮಸ್ಥರಿಂದ ಪ್ರಾರ್ಥನೆ ನಡೆಯಿತು.ಬಳಿಕ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬಳಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ತನಕ ಎಕ್ಕಾರು ಗ್ರಾಮಸ್ಥರಿಂದ ಪಾದಯಾತ್ರೆಯು ಸಾಗಿತು .ಗ್ರಾಮಸ್ಥರೆಲ್ಲರೂ ಸೇರಿ ಪಾದಯಾತ್ರೆಯ ಮೂಲಕ ಸಾಗಿ ಕಟೀಲು ದೇವಿಗೆ ಬೊಂಡಾಭಿಷೇಕ ಸೇವೆಯನ್ನು ನೆರವೇರಿಸಲು ಸಿಯಾಳವನ್ನು ದೇವಸ್ಥಾನಕ್ಕೆ ಸಮರ್ಪಿಸಿದರು.
ಈ ಸಂದರ್ಭ ಎಕ್ಕಾರು ಶ್ರೀ ಗೋಪಾಲಕೃಷ್ಣ ಮಠದ ವೇದಮೂರ್ತಿ ಹರಿದಾಸ ಉಡುಪ,ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ,ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ,ಸಂತೋಷ್ ಭಂಡಾರಿ ಮಿತ್ತೊಟ್ಟುಬಾಳಿಕೆ,ಅತ್ತೂರು ಪ್ರಸನ್ನ ಮುದ್ದ ನಡ್ಯೋಡಿಗುತ್ತು,ಡಾ.ಪದ್ಮನಾಭ್ ಭಟ್ ,ಪ್ರಕಾಶ್ ಕುಕ್ಯಾನ್ ,ಸದಾಶಿವ ಶೆಟ್ಟಿ ಮುರ,ದಯಾನಂದ ಶೆಟ್ಟಿ ಎಲಿಯಾರು ಹಾಗೂ ಗ್ರಾಮಸ್ಥರು ಹಾಜರಿದ್ದರು.