-->

ಅಮಲು ಪದಾರ್ಥ ಹಾಗೂ ಮಾನಸಿಕ ವೇದನೆಯಿಂದ ಬಿಡುಗಡೆ ಬಗ್ಗೆ  ಕಾರ್ಯಗಾರ

ಅಮಲು ಪದಾರ್ಥ ಹಾಗೂ ಮಾನಸಿಕ ವೇದನೆಯಿಂದ ಬಿಡುಗಡೆ ಬಗ್ಗೆ ಕಾರ್ಯಗಾರ

ಕಿನ್ನಿಗೋಳಿ:ಸಮಾಜದಲ್ಲಿ ದಾರಿ ತಪ್ಪಿದವರನ್ನು ದುಶ್ಚಟಕ್ಕೆ ಒಳಗಾದವರನ್ನು ಮುಖ್ಯವಾಹಿನಿಗೆ ಕರೆತರುವ ಹೇಮಾಚಾರ್ಯ ಅವರ ಕಾರ್ಯ ಅಭಿನಂದನೀಯ ಎಂದು ಎಸ್ ವಿಡಿಯ ಫಾ ಸಿಪ್ರಿಯಾನ್ ಲೂವೀಸ್ ಹೇಳಿದರು.
ಅವರು ಕಿನ್ನಿಗೋಳಿಯ ಮೂರುಕಾವೇರಿ ಇಯಾನ್ ಕೇರ್ಸ್ ಪೌಂಡೇಶನ್ ಹಾಗೂ ಎಂಸಿಸಿ ಬ್ಯಾಂಕ್ ಜಂಟಿ ಆಶ್ರಯದಲ್ಲಿ ಅಮಲು ಪದಾರ್ಥ ಹಾಗೂ ಮಾನಸಿಕ ವೇದನೆಯಿಂದ ಬಿಡುಗಡೆ ಬಗ್ಗೆ ನಡೆದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

 ಉಳೆಪಾಡಿ  ಶ್ರೀ ದುರ್ಗಾಪರಮೇಶ್ವರಿ ಮಹಾಮಾಯಿ ದೇವಸ್ಧಾನದ ಆಡಳಿತ ಮೊಕ್ತೇಸರ ಮೋಹನ್ ದಾಸ್ ಸುರತ್ಕಲ್ ಅವರು  ಮಾತನಾಡಿ ಸಮಾಜದಲ್ಲಿ ದುಶ್ಚಟಗಳಿಂದ ಯುವ ಜನಾಂಗ ದಾರಿ ತಪ್ಪುತ್ತಿದ್ದಾರೆ.ಇವರಿಗೆ ಸರಿಯಾದ ಮಾರ್ಗದರ್ಶನ ಸಿಕ್ಕಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳಲು ಸಹಕಾರಿಯಾಗಲಿದೆ ಎಂದರು.

ಇದೇ ವೇಳೆ ಇಯಾನ್ ಕೇರ್ಸ್ ಫೌಂಡೇಶನ್ ಟ್ರಸ್ಟಿ ಡೆನ್ಜಿಲ್ ಪಿಂಟೋ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಂಸಿಸಿ ಬ್ಯಾಂಕ್ ಚೇಯರ್ ಮ್ಯಾನ್ ಅನಿಲ್ ಲೋಬೋ.ಯುಗಪುರುಷ ಪತ್ರಿಕೆ ಪ್ರಧಾನ  ಸಂಪಾದಕ ಕೆ ಭುವನಾಭಿರಾಮ ಉಡುಪ.ಡಾ.ಡೆರಿಕ್ ಲೋಭೋ.ಹೇಮಾಚಾರ್ಯ.ಜೊಸ್ಸಿ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807