ಹಿಂದೂ ಸಂಘಟನೆಗಳ ನಿಷೇಧ ಪ್ರಸ್ತಾಪ ವಿರೋಧಿಸಿ ಹನುಮಾನ್ ಚಾಲೀಸಾ ಪಠಣ
Friday, May 5, 2023
ಗಂಜಿಮಠ:ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ಪ್ರಸ್ತಾಪದ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ವಿವಿಧ ದೇವಾಲಯಗಳಲ್ಲಿ ಭಕ್ತರು ಹನುಮಾನ್ ಚಾಲೀಸಾ ಪಠಣ ಅಭಿಯಾನ ಕೈಗೊಂಡಿದ್ದಾರೆ.
ಮಂಗಳೂರು ನಗರ ಉತ್ತರ ಕ್ಷೇತ್ರದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ಅವರು ಗಂಜಿಮಠದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಭಜರಂಗದಳ ಕಾರ್ಯಕರ್ತರೊಂದಿಗೆ ಸೇರಿ ಗುರುವಾರ ರಾತ್ರಿ ಹನುಮಾನ್ ಚಾಲೀಸಾ ಪಠಣದಲ್ಲಿ ಪಾಲ್ಗೊಂಡರು.
ಈ ಸಂದರ್ಭ ಪ್ರಖಂಡ ಸಂಚಾಲಕ ರಾಜೇಶ್ ಅಂಚನ್, ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಇನ್ನಿತರ ಮುಖಂಡರು, ಗಣ್ಯರು, ಬಜರಂಗದಳ ಕಾರ್ಯಕರ್ತರು ಉಪಸ್ಥಿತರಿದ್ದರು.