ಯಕ್ಷ ದೇಗುಲ ತೋಕೂರು 7ನೇ ವರ್ಷದ ಯಕ್ಷಗಾನ ಬಯಲಾಟ, ಸಾಧಕರಿಗೆ ಸನ್ಮಾನ
Tuesday, March 3, 2026
ತೋಕೂರು ವತಿಯಿಂದ 7ನೇ ವರ್ಷದ ಯಕ್ಷಗಾನ ಬಯಲಾಟದ ಅಂಗವಾಗಿ ಓಂಕಾರೇಶ್ವರೀ ಮಂದಿರದ ಮುಂಭಾಗದಲ್ಲಿ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ತುಳು ಪೌರಾಣಿಕ ಯಕ್ಷಗಾನ ಪ್ರಸಂಗ ಕೋರ್ದಬ್ಬು ಬಾರಗ ಪ್ರದರ್ಶನಗೊಂಡಿತು.ಈ ಸಂದರ್ಭ ಯಕ್ಷ ದೇಗುಲದ ಗೌರವಾಧ್ಯಕ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯಕೃಷ್ಣ ಕೋಟ್ಯಾನ್, ಸುಂಕದಕಟ್ಟೆ ಮೇಳದ ಹಿರಿಯ ಯಕ್ಷಗಾನ ಕಲಾವಿದ ರಮೇಶ್ ಕುಲಶೇಖರ ಹಾಗೂ ರಂಗಮಾಣಿಕ್ಯ ಸುಬ್ಬು ಸಾಂಟ್ಯಾರು ಅವರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು.
ಯಕ್ಷ ದೇಗುಲದ ಅಧ್ಯಕ್ಷ ದಿನಕರ್ ಸಾಲ್ಯಾನ್, ಉಪಾಧ್ಯಕ್ಷ ಸಂಪತ್ ಜೆ ಶೆಟ್ಟಿ, ಪದ್ಮರಾಜ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಅಮೀನ್ ತೋಕೂರು, ಜೊತೆ ಕಾರ್ಯದರ್ಶಿ ಶ್ರೀಮತಿ ಕುಸುಮ ಹರೀಶ್ ಕೋಟ್ಯಾನ್, ಕೋಶಾಧಿಕಾರಿ ನವೀನ್ ಚಂದ್ರ ಅಮೀನ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಅಮೀನ್ ತೋಕೂರು ಕಾರ್ಯಕ್ರಮ ನಿರೂಪಿಸಿದರು.