ಕೊಡೆತ್ತೂರು ಶ್ರೀ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮ ಹಾಗೂ ಆದರ್ಶ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮ
Wednesday, January 28, 2026
ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದ ಟ್ರಸ್ಟ್‌ನ ದೇವಿಪ್ರಸಾದ ಶೆಟ್ಟಿ ಹೇಳಿದರು ಅವರು ಕೊಡೆತ್ತೂರು ಶ್ರೀ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮದ ಸಂದರ್ಭ ನಡೆದ ಆದರ್ಶ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವೇಳೆ ಸಮಾಜ ಸೇವಕ ಪುರುಷೋತ್ತಮ ಶೆಟ್ಟಿ, ಕೊಡೆತ್ತೂರುಗುತ್ತು ಗುತ್ತಿನಾರ್ ನಿತಿನ್‌ಕುಮಾರ್ ಶೆಟ್ಟಿ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಸಂಘದ ಸದಸ್ಯ ದಾಮೋದರ ಶೆಟ್ಟಿ ಹಾಗೂ ಪರಿಸರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಅಜಯ್ ದೀಕ್ಷಿತ್ ಮೂಡುಬಿದ್ರೆ, ಶಿಕ್ಷಕ ಕೆ.ವಿ.ಶೆಟ್ಟಿ ದೇವಸ್ಯ, ಕೆ.ಭುವನಾಭಿರಾಮ ಉಡುಪ, ಜಯರಾಮ ಮುಕ್ಕಾಲ್ದಿ,ಮೀರಾ ಶೆಟ್ಟಿ. ಆದರ್ಶ ಬಳಗದ ಅಧ್ಯಕ್ಷ ಯುವರಾಜ ಶೆಟ್ಟಿ, ಗಣೇಶ್ ಶೆಟ್ಟಿ, ಜಯಂತ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು. ಕೇಶವ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ, ನಾಟಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.