ಜ.30 : ಕಟೀಲಿನಲ್ಲಿ ದುರ್ಗಾ ರಾಮೋತ್ಸವ : ದೀಪೋತ್ಸವ ರಥಬೀದಿಯಲ್ಲಿ ಸಹಸ್ರಾರು ಭಜಕರಿಂದ ಕುಣಿತ ಭಜನೆ
Wednesday, January 28, 2026
ಕಟೀಲು : ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶ ನಡೆದ ದಿನದ ವರ್ಷಾಚರಣೆ ಹಾಗೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ವರ್ಷಾಚರಣೆಯ ಸಲುವಾಗಿ ಜನವರಿ 30 ರ ಶುಕ್ರವಾರ ಸಂಜೆ 6.30ರಿಂದ 8 ಗಂಟೆಯತನಕ ಕಟೀಲಿನಲ್ಲಿ ಶ್ರೀ ದುರ್ಗಾ ರಾಮೋತ್ಸವ ನಡೆಯಲಿದೆ. ಕಟೀಲು ರಥಬೀದಿಯಲ್ಲಿ ದೀಪೋತ್ಸವ ಹಾಗೂ ವಿವಿಧ ಭಜನಾ ತಂಡಗಳ ನೂರಾರು ಭಜಕರಿಂದ ಸಾಮೂಹಿಕ ಕುಣಿತ ಭಜನೆ ನಡೆಯಲಿದೆ. ಕಟೀಲು ಸಹೋದರಿಯರಾದ ಶ್ರೀಮತಿ ಜ್ಯೋತಿ, ವನಿತಾ, ಅರುಣಾ ಸಂಧ್ಯಾ ಹಾಗೂ ಸೌಮ್ಯ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಇದೆ. ಕಟೀಲು ದೇವರಿಗೆ ವಿಶೇಷ ರಂಗಪೂಜೆ ನಡೆಯಲಿದೆ.