ಫೆ.14: ಏಳಿಂಜೆ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಯಾಗ,ಸಭೆ
Sunday, January 18, 2026
ಕಿನ್ನಿಗೋಳಿ :ಏಳಿಂಜೆ ಲಕ್ಷೀಜನಾರ್ದನ ಮಹಾಗಣಪತಿ ದೇವಸ್ಥಾನದಲ್ಲಿ ಫೆ. 14 ರಂದು ಅತೀ ವಿಶೇಷವಾದ ವಿಷ್ಣು ಸಹಸ್ರ ನಾಮ ಯಾಗ ನಡೆಯಲಿದ್ದು ಭಕ್ತರ ಸಹಕಾರ ಅಗತ್ಯ ಎಂದು ಏಳಿಂಜೆ ಕೊಂಜಾಲಗುತ್ತು ಪ್ರಭಾಕರ ಶೆಟ್ಟಿ ಹೇಳಿದರು. ಅವರು ಶ್ರೀ ಕ್ಷೇತ್ರ ಏಳಿಂ ಜೆಯಲ್ಲಿ ನಡೆಯಲಿರುವ ವಿಷ್ಣು ಸಹಸ್ರನಾಮ ಯಾಗದ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾಗದ ಸಂದರ್ಭ ಕ್ಷೇತ್ರಕ್ಕೆ ಸಾವಿರಾರು ಮಂದಿ ಬೇಟಿ ನೀಡಲಿದ್ದು ಅದಕ್ಕೆ ಬೇಕಾದ ಪೂರ್ವ ತಯಾರಿ ಅಗತ್ಯವಾಗಿದೆ. ಭಕ್ತರಿಗೆ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳಬೇಕು ಎಂದರು. ದೇವಸ್ಥಾನದ ಅರ್ಚಕ
ವೈ ,ಗಣೇಶ್ ಭಟ್ ಏಳಿಂಜೆ ಮತ್ತು
ಅನಿಲ್ ಶೆಟ್ಟಿ ಏಳಿಂಜೆ ಕೊಂಜಾಲಗುತ್ತು ಯಾಗದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ
ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೊಂಜಾಲಗುತ್ತು ಪ್ರಭಾಕರ ಶೆಟ್ಟಿ ,
ಅರ್ಚಕ ವರುಣ್ ಭಟ್ ಏಳಿಂಜೆ, ಪಾಂಡುರಂಗ ಶೆಟ್ಟಿ ಮಂಜೊಟ್ಟಿಗುತ್ತು, ದಿವಾಕರ ಶೆಟ್ಟಿ ಕೊಂಜಾಲಗುತ್ತು ನವಚೇತನ ಯುವಕ ಮಂಡಲದ ಅಧ್ಯಕ್ಷ ಪ್ರಭಾಕರ ಆಚಾರ್ಯ,
ಕೋಂಜಾಲುಗುತ್ತು ಬಾಲಕೃಷ್ಣ ಶೆಟ್ಟಿ, ಭಾಸ್ಕರ ಶೆಟ್ಟಿ ಬಂಕಡೆಬಾವ, ಸ್ವರಾಜ್ ಶೆಟ್ಟಿ ಮುಂಡ್ಕೂರು, ಸಾಯಿನಾಥ್ ಶೆಟ್ಟಿ ಮುಂಡ್ಕೂರು, ಲಕ್ಷ್ಮಣ್ ಬಿ.ಬಿ ಏಳಿಂಜೆ, ಪ್ರಕಾಶ್ ಶೆಟ್ಟಿ, ಹೇಮ ನಾಥ ಶೆಟ್ಟಿ, ಕೃಷ್ಣ ಮೂಲ್ಯ, ಗಿರೀಶ್ ಶೆಟ್ಟಿ ಕೋಲೆಟ್ಟು, ಶರತ್ ಶೆಟ್ಟಿ ಕಿನ್ನಿಗೋಳಿ, ಹರೀಶ್ ಶೆಟ್ಟಿ ತಾಮಣಿಗುತ್ತು, ಮಹಿಳಾ ಮಂಡಳಿಯ ಅಧ್ಯಕ್ಷೆ ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.