ಕಿನ್ನಿಗೋಳಿ: ಖಿಲ್‌ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಟಿ.ಎ. ಹನೀಫ್ ಪುನರಾಯ್ಕೆ
Sunday, December 28, 2025
ಕಿನ್ನಿಗೋಳಿ: ಖಿಲ್‌ರಿಯಾ ಜುಮಾ ಮಸೀದಿ ಶಾಂತಿನಗರ ಗುತ್ತಕಾಡು ಇದರ 2026ನೇ ಸಾಲಿನ ಆಡಳಿತ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಶುಕ್ರವಾರ ಜಮಾಅತ್ ಮಹಾಸಭೆಯಲ್ಲಿ ನಡೆಯಿತು. ಟಿ.ಎ. ನಝೀರ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ನೂತನ ಆಡಳಿತ ಸಮಿತಿಗೆ ಟಿ.ಎ. ಹನೀಫ್ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ನವಾಝ್ ಕಲ್ಕರೆ, ಕಾರ್ಯದರ್ಶಿಯಾಗಿ ಇಕ್ಬಾಲ್ ಗುತ್ತಕಾಡು, ಜೊತೆ ಕಾರ್ಯದರ್ಶಿಯಾಗಿ ಆರಿಫ್ ಗುತ್ತಕಾಡು, ಖಜಾಂಚಿಯಾಗಿ ನಾಸೀರ್, ಲೆಕ್ಕ ಪರಿಶೋಧಕರಾಗಿ ಜೆ.ಹೆಚ್. ಜಲೀಲ್ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಜಿ ಟಿ.ಹೆಚ್. ಮಯ್ಯದ್ದಿ, ಹಾಜಿ ಅಬ್ದುಲ್ ರಹಿಮಾನ್, ಅಸ್ಕರಾಲಿ, ಟಿ.ಕೆ. ಅಬ್ದುಲ್ ಖಾದರ್, ಅಬ್ದುಲ್ ರಝಾಕ್ ಇ., ಕೆ.ಯು. ಹಸನಬ್ಬ, ವಿ. ಅಬೂಬಕ್ಕರ್, ಟಿ. ಮೊಹಮ್ಮದ್, ನೂರುದ್ದೀನ್, ಇ. ಖಾದರ್, ಖಾದರ್ ಎಂ., ಟಿ.ಎಂ.ಎ. ಮನ್ಸೂರ್, ಶಫೀಕ್, ಶಮೀಮ್ ಅಲಿ ಹಾಗೂ ನೌಫಲ್ ಕಲ್ಕರೆ ಅವರನ್ನು ನೇಮಿಸಲಾಯಿತು.