ವಿವಿಧ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಸಭೆ
Thursday, December 4, 2025
ಮಂಗಳೂರು:ಮಂಗಳೂರು ಮಹಾನಗರ ಪಾಲಿಕೆಯ ಶಾಸಕರ ಕಚೇರಿಯಲ್ಲಿ ಡಿ. 04 ರಂದು ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ಜೊತೆ ವಿವಿಧ ಅಭಿವೃದ್ದಿ ಕಾಮಗಾರಿಗಳ ಬ ಗ್ಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಸಭೆ ನೆರವೇರಿಸಿದರು.
ಸಭೆಯಲ್ಲಿ, ಸುರತ್ಕಲ್ ಜಂಕ್ಷನ್ ಅಭಿವೃದ್ದಿ ಹಾಗೂ ಕಾವೂರು ಕೆರೆಯ ಸುತ್ತ ಮುತ್ತ ಇರುವ ಹಳೇ ಮಾದರಿ ಕೆಂಪು ಕಲ್ಲಿನ ಆಳುಗುಂಡಿ ಮತ್ತು ಹಳೇ ಒಳ ಚರಂಡಿ ಜಾಲವನ್ನು ಬದಲಾಯಿಸುವ ಬಗ್ಗೆ ಆ ಮೂಲಕ ಕೊಳಚೆ ನೀರು ಸೋರುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಬಗ್ಗೆ, ಸುರತ್ಕಲ್ ಜಂಕ್ಷನ್ ನ ಸಮಗ್ರ ಅಭಿವೃದ್ದಿ ಯೋಜನೆಗಳ ಬಗ್ಗೆ ಪಾಲಿಕೆ ಅಧಿಕಾರಿ ಮತ್ತು ಅಭಿಯಂತರರುಗಳಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಪಾಲಿಕೆ ಅಭಿಯಂತರರುಗಳು ಹಾಜರಿದ್ದರು.