ಈಜು ಸ್ಪರ್ಧೆ : ಸುರತ್ಕಲ್ ಎನ್ಐಟಿಕೆಯ ಡಾ.ಶಶಿಕಾಂತ ಕೌಡೂರು ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ
Tuesday, November 11, 2025
ಡಾ. ಶಶಿಕಾಂತ್ ಕೌಡೂರು ಅವರು ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಡಾ. ಶಶಿಕಾಂತ ಕೌಡೂರು ಅವರು ನವೆಂಬರ್ 1 ಮತ್ತು 2 ರಂದು ಬೆಂಗಳೂರಿನಲ್ಲಿ ಜರುಗಿದ ಕರ್ನಾಟಕ ರಾಜ್ಯಮಟ್ಟದ ಮಾಸ್ಟರ್ಸ್ ಈಜುಸ್ಪರ್ಧೆಯಲ್ಲಿ ಐವತ್ತು ಮೀ. ಬ್ಯಾಕ್ ಸ್ಟ್ರೋಕ್ ಶೈಲಿಯಲ್ಲಿ ಚಿನ್ನ ಹಾಗೂ 50 X 4 ಟೀಮ್ ಮೆಡ್ಲೆ ರಿಲೇಯಲ್ಲಿ ಕಂಚು ಗಳಿಸಿದರು. ಡಾ. ಕೌಡೂರು ಅವರು ಎನ್ಐಟಿಕೆ ಸುರತ್ಕಲ್ ನ ಪ್ರಾಧ್ಯಾಪಕರಾಗಿದ್ದಾರೆ ಹಾಗೂ ಎನ್ಐಟಿಕೆ ಸ್ವಿಮಿಂಗ್ ಕ್ಲಬ್ ನ ಸದಸ್ಯರಾಗಿದ್ದಾರೆ. ಇವರು ನವೆಂಬರ್ 21 ರಿಂದ 23ರ ವರೆಗೆ ಹೈದರಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಈಜುಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.ಇವರಿಗೆ NITK ಸ್ವಿಮ್ಮಿಂಗ್ ಪೂಲ್ ನ ತರಬೇತುದಾರ ಸಂತೋಷ ಪಿ ಎಂ ತರಬೇತಿ ನೀಡಿರುತ್ತಾರೆ.