ನಾಳೆ ಕಟೀಲು ಏಳನೇ ಮೇಳದ ಆರಂಭೋತ್ಸವ,ಇಂದು ಬಜಪೆಯಿಂದ ಕಟೀಲಿಗೆ ಭವ್ಯ ಮೆರವಣಿಗೆ
Saturday, November 15, 2025
ಕಟೀಲು: ಕಟೀಲಿನಲ್ಲಿ ಏಳನೇ ಮೇಳದ ಆರಂಭೋತ್ಸವವು ನ.16 ರ ಆದಿತ್ಯವಾರದಂದು ವಿಜೃಂಭಣೆಯಿಂದ ನಡೆಯಲಿದೆ.ನ.15 ರಂದು ಏಳು ಮೇಳಗಳ ದೇವರ ಭವ್ಯ ಮೆರವಣಿಗೆಯು ಬಜಪೆಯಿಂದ ಕಟೀಲಿನ ತನಕ ನಡೆಯಲಿದೆ.ಈಗಾಗಲೇ ಮೇಳದ ಆರಂಭೋತ್ಸವಕ್ಕೆ ಬಜಪೆಯಿಂದ ಕಟೀಲು ತನಕವೂ ಬಂಟಿಂಗ್ಸ್ ಗಳಿಂದ ಶೃಂಗಾರಗೊಂಡಿದೆ.ಅಲ್ಲದೆ ಎಕ್ಕಾರು ದ್ವಾರದಿಂದ ಕಟೀಲು ತನಕ ಹೆದ್ದಾರಿಯಂಚಿನ ಉದ್ದಕ್ಕೂ ವಿದ್ಯುತ್ ದೀಪಗಳಿಂದ ಆಲಂಕೃತಗೊಂಡಿದೆ.
ನ.15 ರಂದು ಸಂಜೆ ನಡೆಯುವ ಏಳು ಮೇಳಗಳ ದೇವರ ಭವ್ಯ ಮೆರವಣೆಗೆಯಲ್ಲಿ ವಿವಿಧ ಭಜನಾ ತಂಡಗಳು,ಟ್ಯಾಬ್ಲೋಗಳು,ಕೊಂಬು,ಕೀಲು ಕುದುರೆ,ಬೇತಾಳ,ಹುಲಿವೇಷಗಳು ಮೆರುಗು ನೀಡಲಿದೆ. ಬಜಪೆಯಲ್ಲಿ ಭವ್ಯ ಮೆರವಣಿಗೆಯನ್ನು ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿಯವರು ಉದ್ಘಾಟಿಸಲಿದ್ದು,ಶಾಸಕ ಉಮಾನಾಥ ಕೋಟ್ಯಾನ್,ಮಿಥುನ್ ರೈ,ಗುರುಪುರ ವಜ್ರದೇಹಿ ಮಠದ ಶ್ರೀರಾಜಾಶೇಖಾರನಂದ ಸ್ವಾಮೀಜಿ, ಸಹಿತ ಗಣ್ಯಾತೀಗಣ್ಯರು ಪಾಲ್ಗೊಳ್ಳಲಿರುವರು.ಬಜಪೆಯಿಂದ ಕಟೀಲಿನ ತನಕ ಅಲ್ಲಲ್ಲಿ ಪಾನೀಯ ಹಾಗೂ ಫಲಹಾರದ ವ್ಯವಸ್ಥೆ ಇರಲಿದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.ಎಕ್ಕಾರಿನಿಂದ ಕಟೀಲು ತನಕ ಪಾದಯಾತ್ರೆ ಮೂಲಕ ಸಾಗಿ ಮೇಳದ ಸ್ವತ್ತುಗಳನ್ನು ದೇವರಿಗೆ ಸಮರ್ಪಿಸಲಾಗುವುದು.
ಕಟೀಲು ಮೇಳಗಳ ಪ್ರದರ್ಶನ ಏಕಕಾಲಕ್ಕೆ ಏಳು ರಂಗಸ್ಥಳಗಳಲ್ಲಿ ನಡೆಯಲಿದೆ.ನ. 16ರಂದು ಏಳನೆಯ ಮೇಳದ ಉದ್ಘಾಟನೆ, ರಾತ್ರಿ 8.30ಕ್ಕೆ ಮೇಳಗಳ ದೇವರ ಪೂಜೆ, ಬಯಲಾಟ ಪಾಂಡವಾಶ್ವಮೇಧ ನಡೆಯಲಿದೆ. ಸಂಜೆ 6ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ, ದಿನೇಶ್ ಗುಂಡೂರಾವ್, ಸಂಸದ ಕ್ಯಾ । ಬ್ರಿಜೇಶ್ ಚೌಟ, ಶಾಸಕ ಉಮನಾಥ ಕೋಟ್ಯಾನ್ ಸಹಿತ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ಅಂದು 25,000ಕ್ಕೂ ಅಧಿಕ ಮಂದಿ ಕ್ಷೇತ್ರಕ್ಕೆ ಬರುವ ನಿರೀಕ್ಷೆ ಇದೆ.
ಮೇಳಕ್ಕೆ ಏಳು ಬಸ್ ಹಾಗೂ ಟ್ರಕ್ಕ್ ಈಗಾಗಲೇ ಹೊರಡಲು ಸಿದ್ದವಾಗಿ ನಿಂತಿದೆ.