ಕಾನೂನು ಬದ್ಧವಾಗಿ ಜೀವನ ನಡೆಸಿದರೆ ಜೀವನ ಸುಗಮ - ಶ್ರೀಧರ ಎಣ್ಮಕಜೆ
Friday, November 14, 2025
ಬಜಪೆ:ಸಮಗ್ರ ಶಿಕ್ಷಣ ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಸಾಕ್ಷರತಾ ಇಲಾಖೆ ಮಂಗಳೂರು, ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು, ಇಲ್ಲಿ ಸರಕಾರದ ಆದೇಶದಂತೆ ಮಕ್ಕಳ ದಿನಾಚರಣೆಯನ್ನು "ಪೋಷಕ ಶಿಕ್ಷಕರ ಮಹಾ ಸಭೆ" ನಡೆಸುವ ಮೂಲಕ ನಡೆಸಲಾಯಿತು.
ಪೋಷಕ ಶಿಕ್ಷಕರ ಮಹಾಸಭೆಯನ್ನು ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು
"ಕಾನೂನು ಬದ್ಧವಾಗಿ ಜೀವನ ನಡೆಸಿದರೆ ಜೀವನ ಸುಗಮವಾಗುತ್ತದೆ. ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು ಎಂದರು. ಅವರು ಮೂಲಭೂತ ಹಕ್ಕುಗಳು, ಪೋಕ್ಸೋ ಕಾಯ್ದೆ, ಗುಡ್ ಟಚ್ ಮತ್ತು ಬ್ಯಾಡ್ ಟಚ್, ಮಹಿಳಾ ಹಕ್ಕುಗಳು. ಪೋಷಕರ ಮತ್ತು ವಿದ್ಯಾರ್ಥಿಗಳ ಕಾನೂನಿಗೆ ಸಂಬಂಧಪಟ್ಟಂತಹ ಪ್ರಶ್ನೆಗಳಿಗೆ ಪರಿಹಾರಗಳನ್ನು ಸೂಚಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದಿರಾ ಎನ್ ರಾವ್ ಅವರು ಕಾರ್ಯಕ್ರಮದ ರೂಪರೇಷೆಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತಿಳಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಹೆಚ್ ಎಂ ಅವರು ಸರಕಾರದಿಂದ ವಿದ್ಯಾರ್ಥಿಗಳಿಗೆ ದೊರೆಯುವ ಉಚಿತ ಸವಲತ್ತುಗಳು ಹಾಗೂ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಶ್ರೀಮತಿ ವಿದ್ಯಾ ಲತಾ ಅವರು ವಿದ್ಯಾರ್ಥಿಗಳ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾ ಸಾಧನೆಯ ಬಗ್ಗೆ ತಿಳಿಸಿದರು. ಶ್ರೀಮತಿ ಜ್ಯೋತಿ ಬಿ ಅವರು ವಿದ್ಯಾರ್ಥಿಗಳ ಸಹ ಪಠ್ಯ ಚಟುವಟಿಕೆಗಳ ಸಾಧನೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭ ಎಸ್ ಡಿ ಎಂ ಸಿ ಅಧ್ಯಕ್ಷ ಸುದೀಪ್ ಅಮೀನ್, ಎಸ್ ಡಿ ಎಂ ಸಿ ಸದಸ್ಯರಾದ ಸುರೇಶ್ ಶೆಟ್ಟಿ, ರತನ್ ಶೆಟ್ಟಿ, ಹೇಮಂತ, ಶ್ರೀಮತಿ ಲತಾ, ಶ್ರೀಮತಿ ದಾವಾಲಬಿ ಉಪಸ್ಥಿತರಿದ್ದರು.
ಶ್ರೀಮತಿ ಚಿತ್ರಾ ಶ್ರೀ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು.ಡಾ ಅನಿತ್ ಕುಮಾರ್ ಸ್ವಾಗತಿಸಿದರು. ಶ್ರೀಮತಿ ವಿನ್ನಿ ನಿರ್ಮಲ ಡಿಸೋಜಾ ವಂದಿಸಿದರು.