ರೋಸಾ ಮಿಸ್ತಿಕ ಪ. ಪೂ. ಕಾಲೇಜು ಎನ್ ಎಸ್ ಎಸ್ ಶಿಬಿರ
Thursday, October 16, 2025
ಕಿನ್ನಿಗೋಳಿ : ನಾಯಕತ್ವ, ಸಹಬಾಳ್ವೆ, ಮಾನವೀಯತೆಗಳನ್ನು ಕಲಿಸುವ ಜೊತೆಗೆ ವ್ಯಕ್ತಿತ್ವ ನಿರ್ಮಾಣವನ್ನು ರಾಷ್ಟ್ರೀಯ ಸೇವಾ ಯೋಜನೆ ನಿರ್ಮಾಣ ಮಾಡುತ್ತದೆ ಎಂದು ಬೆಥನಿ ಮಂಗಳೂರು ಪ್ರಾಂತ್ಯಾಧಿಕಾರಿಣಿ ವಂದನೀಯ ಭಗಿನಿ ಲಿಲ್ಲಿ ಪಿರೇರಾ ಬಿ. ಎಸ್ ಹೇಳಿದರು.
ಅವರು ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಕಿನ್ನಿಕಂಬಳ ರೋಸಾ ಮಿಸ್ತಿಕ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಇಗರ್ಜಿಯ ಧರ್ಮಗುರು ರೆ. ಫಾ. ಜೋಕಿಂ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ನ ಸುಧಾಕರ ಶೆಟ್ಟಿ, ರೋಟರಿಯ ಹೆರಿಕ್ ಪಾಯಸ್, ಕಿನ್ನಿಗೋಳಿ ಚರ್ಚ್ ಕಾರ್ಯದರ್ಶಿ ಮೈಕಲ್ ಪಿಂಟೋ, ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು, ಕಾಲೇಜಿನ ಪ್ರಾಂಶುಪಾಲೆ ವಂದನೀಯ ಭಗಿನಿ ಅನಿತಾ ಲಿಡಿಯ ಬಿ. ಎಸ್
ಕಿನ್ನಿಕಂಬಳ ಕಾಲೇಜ್ ಶಿಕ್ಷಕ ರಕ್ಷಕ ಸಂಘದ ಉಷಾ, ಶಿಬಿರಾಧಿಕಾರಿ ಆವಿಲ್ ರೆನಿಲ್ ಡಿಸಿಲ್ವಾ, ಶ್ರೀಮತಿ ದೀಕ್ಷಾ, ಎನ್ ಎಸ್ ಎಸ್ ನಾಯಕರಾದ ರಾಹೀಶ್, ನಮೃತಾ, ಯಶಸ್, ಚಂದನ, ಅಜಯ್, ಯಶಸ್ವಿ ಮತ್ತಿತರರಿದ್ದರು.
ಶಾಲಾ ಕ್ರೀಡಾಂಗಣ ಸಮತಟ್ಟುಗೊಳಿಸುವಿಕೆ, ಪ್ಲಾಸ್ಟಿಕ್ ಜಾಗೃತಿ, ಸ್ವಚ್ಛತೆ, ಗ್ರಾಮದರ್ಶನ ಇತ್ಯಾದಿ ಚಟುವಟಿಕೆ ಮಾಡಲಾಗಿತ್ತು.