Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸುರತ್ಕಲ್ :ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ

ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಿಂದ ಸುರತ್ಕಲ್ ಪೂರ್ವ 2ನೇ ವಾರ್ಡಿನ ವೆಂಕಟರಮಣ ಕಾಲನಿ ಬಳಿ ಹಾಗೂ
ರಸ್ತೆ ಅಭಿವೃದ್ಧಿ ಕಾಮಗಾರಿಗೆ 8 ಲಕ್ಷ ರೂಪಾಯಿ, ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿ ಮಳೆ ನೀರಿನ ಚರಂಡಿ ಕಾಮಗಾರಿಗೆ 5 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು  ಪಾಲಿಕೆ ವಾರ್ಡ್ ನಂಬ್ರ 2ರಲ್ಲಿ ಬಹಳಷ್ಟು ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ ನಡೆದಿದೆ. ನಿಕಟಪೂರ್ವ ಪಾಲಿಕೆಯ ಸದಸ್ಯರಾದ  ಶ್ವೇತಾ ಪೂಜಾರಿ ಅವರ ಅವಧಿಯಲ್ಲಿ  ರಸ್ತೆ ಕಾಂಕ್ರಟೀಕರಣ, ತಡೆಗೋಡೆ ನಿರ್ಮಾಣ, ಮುಂಚೂರಿನಲ್ಲಿ  ಬರುತ್ತಿದ್ದ ನೆರೆಗೆ ಶಾಶ್ವತ ಪರಿಹಾರ  ಸೇರಿದಂತೆ  ಉತ್ತಮ ಕೆಲಸ ಕಾರ್ಯಗಳನ್ನು ಮಾಡಲಾಗಿದೆ ಎಂದರು.

ಪಾಲಿಕೆ ಸದಸ್ಯೆ ಶ್ವೇತಾ ಪೂಜಾರಿ ಅವರು  ಅನುದಾನ ಒದಗಿಸಿಕೊಟ್ಟ  ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.


 ಈ ಕಾರ್ಯಕ್ರಮದಲ್ಲಿ, ನಿಕಟಪೂರ್ವ ಪಾಲಿಕೆ ಸದಸ್ಯರಾದ ಸರಿತಾ ಶಶಿಧರ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್  ಅಧ್ಯಕ್ಷರಾದ ಅಶೋಕ್ ಶೆಟ್ಟಿ ತಡಂಬೈಲ್, ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾದ  ದಿನಕರ್ ಇಡ್ಯಾ, ಬಿಜೆಪಿ ಪ್ರಮುಖರಾದ ಪುಷ್ಪರಾಜ್ ಮುಕ್ಕ, ರಾಘವೇಂದ್ರ ಶೆಣೈ, ಸುರೇಂದ್ರ, ಸುಧಾಕರ್, ಸಂತೋಷ್ ಕುಮಾರ್, ಸಜಿತ್  ಮತ್ತಿತರರು ಉಪಸ್ಥಿತರಿದ್ದರು.