-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಕಟೀಲು ಯಕ್ಷಗಾನ ಕಲಾವಿದರಿಗೆ ಪುನರ್‌ಮನನ ಶಿಬಿರಯಕ್ಷಗಾನದ ಆಭಾಸಗಳನ್ನು ಪ್ರಶ್ನಿಸುವವರು ಯಾರು - ಮುರಲಿ ಕಡೇಕಾರ್

ಕಟೀಲು ಯಕ್ಷಗಾನ ಕಲಾವಿದರಿಗೆ ಪುನರ್‌ಮನನ ಶಿಬಿರಯಕ್ಷಗಾನದ ಆಭಾಸಗಳನ್ನು ಪ್ರಶ್ನಿಸುವವರು ಯಾರು - ಮುರಲಿ ಕಡೇಕಾರ್


ಕಟೀಲು : ಯಕ್ಷಗಾನದ ಆಭಾಸಗಳ ಬಗ್ಗೆ ಮಾತಾಡುವವರ ಅಗತ್ಯವಿದೆ. ಚಪ್ಪಾಳೆ ಯಶಸ್ಸಿನ ಮಾನದಂಡವಲ್ಲ. ಕಲಾವಿದರು ಚಪ್ಪಾಳೆಯ ಅಮಲು ಬಿಡಬೇಕು. ಪ್ರೇಕ್ಷಕನ ಆದ್ರ ಭಾವನೆಯೇ ಕಲಾವಿದನ ಸಾರ್ಥಕ್ಯದ ಕ್ಷಣ. ಭಕ್ತಿ ಶ್ರದ್ಧೆಯಿಂದ ಆಟ ಆಡಿಸುವ ಭಕ್ತರ ಮನಸ್ಸಿಗೂ ಹಿತವಾಗುವಂತೆ ವ್ಯಕ್ತಿತ್ವ, ವೇಷಧಾರಿಕೆ, ಯಕ್ಷಗಾನ ಪ್ರದರ್ಶನ ನೀಡುವ ಜವಾಬ್ದಾರಿ ಕಟೀಲು ಮೇಳದ ಕಲಾವಿದರಿಗೆ ಇದೆ ಎಂದು ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೇಕಾರ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳೂ ಮೇಳಗಳ ಕಲಾವಿದರಿಗೆ ಮೂರು ದಿನಗಳ ಕಾಲ ನಡೆಯುವ ಪುನರ್ ಮನನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಬಡಗಿನಲ್ಲಿ ಬಣ್ಣದ ವೇಷ ಲುಪ್ತವಾಗಿಹೋಗಿದೆ. ತೆಂಕುತಿಟ್ಟು ಹಾಗೂ ಉತ್ತರ ಕನ್ನಡದ  ಪ್ರಭಾವದ ಮುಂದೆ ಬಡಗುತಿಟ್ಟು ಯಕ್ಷಗಾನ ಹೊಡೆತಕ್ಕೊಳಗಾಗಿದೆ. ವೇಷಗಳು ಕುಣಿತ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿವೆ. ಹತ್ತು ಹನ್ನೆರಡು ನಿಮಿಷ ಕುಣಿದು ಒಂದು ನಿಮಿಷದ ಅರ್ಥ ಹೇಳಿದರೆ ಏನು ಉಪಯೋಗ? ಕಟೀಲು ಮೇಳದಲ್ಲಿ ಇವತ್ತಿಗೂ ಚಿಟ್ಟೆ ಇಟ್ಟು ಬಣ್ಣದ ವೇಷ ಮಾಡುತ್ತಿರುವ ಕಲಾವಿದರ ಶ್ರದ್ಧೆ ದೊಡ್ಡದು. ಕಟೀಲು ಮೇಳಗಳು ಪಾರಂಪರಿಕ ವೇಷಗಳನ್ನು ಉಳಿಸಿಕೊಂಡಿರುವುದು ಸಮಾಧಾನಕರ. ಯಕ್ಷಗಾನದಲ್ಲಿ ನಾಗಮಂಡಲ ತೋರಿಸುವುದು ಹೀಗೆ ಇನ್ನೇನೋ ಆಭಾಸಗಳನ್ನು ನೋಡುತ್ತಿದ್ದೇವೆ. ಇವುಗಳ ಕುರಿತು ಮಾತನಾಡಬೇಕಾದವರು ಯಾರು? ಭಾಗವತರು ಹಾಡುವಾಗ ಇಕೋ ಹಾಕುವುದು ಸರಿಯಲ್ಲ. ಯಕ್ಷಗಾನ ಪ್ರದರ್ಶನ ಇನ್ನಷ್ಟು ಚಂದ ಕಾಣಲು ಇಂತಹ ಕಾರ್ಯಾಗಾರಗಳು ಅಗತ್ಯ ಎಂದರು.
ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಮಾತನಾಡಿ ದೇವರ ಸೇವೆ ಎಂಬ ಭಾವನೆಯಿಂದ ಮೇಳದಲ್ಲಿ ತೊಡಗಿಸಿಕೊಳ್ಳಿ. ದೇವರು ಖಂಡಿತವಾಗಿಯೂ ಅನುಗ್ರಹಿಸುತ್ತಾರೆ ಎಂದರು.
ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಮೇಳದ ಪ್ರಬಂಧಕರಾದ ಸುಣ್ಣಂಬಳ ವಿಶ್ವೇಶ್ವರ ಭಟ್, ಕಲಾರಂಗದ ನಾರಾಯಣ ಹೆಗಡೆ ಉಪಸ್ಥಿತರಿದ್ದರು. ಅಂಡಾಲ ದೇವೀಪ್ರಸಾದ ಶೆಟ್ಟಿ ಪ್ರಾರ್ಥಿಸಿದರು. ದಿನಕರ ಗೋಖಲೆ ಸ್ವಾಗತಿಸಿದರು. ಪುತ್ತೂರು ರಮೇಶ್ ಭಟ್ ವಂದಿಸಿದರು. ಡಾ. ಶ್ರುತಕೀರ್ತಿರಾಜ ನಿರೂಪಿಸಿದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ