-->
ಧಾರ್ಮಿಕ ನಂಬಿಕೆಯ ಕ್ಷೇತ್ರ ಸೇವೆ ನಮ್ಮದಾಗಲಿ : ಸಚ್ಚಿದಾನಂದ ಸ್ವಾಮೀಜಿ

ಧಾರ್ಮಿಕ ನಂಬಿಕೆಯ ಕ್ಷೇತ್ರ ಸೇವೆ ನಮ್ಮದಾಗಲಿ : ಸಚ್ಚಿದಾನಂದ ಸ್ವಾಮೀಜಿ

ಬಜಪೆ : ಧಾರ್ಮಿಕ ನಂಬಿಕೆಯನ್ನು ದೇವಸ್ಥಾನದ ಸಾನ್ನಿಧ್ಯದಲ್ಲಿ ಉಳಿಸಿದಂತೆ, ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನದೊಂದಿಗೆ ಬ್ರಹ್ಮಕಲಶ ನಡೆಯುವಾಗ ನಾವೆಲ್ಲರೂ ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಬೇಕು, ಗುಹಾಲಯದ ಆಲಯವಿರುವ ನೆಲ್ಲಿತೀರ್ಥ ಕ್ಷೇತ್ರ ಅಪರೂಪದ ಕ್ಷೇತ್ರವಾಗಿದೆ ಇಲ್ಲಿನ ಸೇವೆ ನೀಡುವುದೇ ನಮ್ಮ ಸೌಭಾಗ್ಯ  ಎಂದು ಕಾಸರಗೋಡು ಎಡನೀರು ಮಠದ ಶ್ರೀ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ  ಅವರು ಹೇಳಿದರು.
ಅವರು  ಶುಕ್ರವಾರದಂದು  ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದ ಗುಹಾ ಪ್ರವೇಶಗೈದು ಗುಹಾ ತೀರ್ಥಸ್ನಾನವನ್ನು ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ನೆಲ್ಲಿತೀರ್ಥ ಪವಿತ್ರ ಗುಹಾಪ್ರವೇಶ ಗುಹಾತೀರ್ಥ ಸ್ನಾನ ಕಾರ್ಯಕ್ರಮವು   ತುಲಾ ಸಂಕ್ರಮಣದ ಸಂದರ್ಭ   ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿಗಳೊಂದಿಗೆ ಕ್ಷೇತ್ರದ  ಶ್ರೀ ಸೋಮನಾಥೇಶ್ವರ ಶ್ರೀ ಮಹಾಗಣಪತಿ ದೇವರು ಹಾಗೂ ಶ್ರೀ ಜಾಬಾಲಿ ಮಹರ್ಷಿ ಅವರ ಸನ್ನಿಧಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಈ ಸಂದರ್ಭ ಕ್ಷೇತ್ರದ ತಂತ್ರಿ ವೆಂಕಟೇಶ್ ತಂತ್ರಿ, 
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ,ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು  ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಕಿನ್ನಿಗೋಳಿ ಯುಗಪುರುಷದ  ಭುವನಾಭಿರಾಮ ಉಡುಪ,ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್.ವಿ ವೆಂಕಟರಾಜ್ ಭಟ್,ಪ್ರಸನ್ನ ಭಟ್,ಎನ್ ವಿ ಜಿಕೆ ಭಟ್,ಎನ್ ವಿ ರಮೇಶ್ ಭಟ್, ಗಣಪತಿ ಭಟ್,ಉದ್ಯಮಿ ಶ್ರೀಪತಿ ಭಟ್,ರಾಜಗೋಪಾಲ ಆಚಾರ್ಯ ಕೋಟೇಶ್ವರ,ವಾದೀಶ್ ಭಟ್ ,ಆನಂದ ಕಾವ,ದೀಪ್ ಕಿರಣ್ ,ಕೃಷ್ಣಪ್ಪ ಪೂಜಾರಿ,ಸುಂದರಪೂಜಾರಿ, ಗ್ರಾಮಸ್ಥರು ಹಾಗೂ ಮೊದಲಾದವರು ಹಾಜರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ