ಬಂಟರ ಸಂಘ (ರಿ.) ಬಜಪೆ ವಲಯದ ಅಧ್ಯಕ್ಷರಾಗಿ ವೇಣುಗೋಪಾಲ್ ಶೆಟ್ಟಿ, ಪಡುಮನೆ ಕರಂಬಾರು ಆಯ್ಕೆ
Thursday, October 30, 2025
ಬಜಪೆ:ಬಂಟರ ಸಂಘ (ರಿ.) ಬಜಪೆ ವಲಯದ ಮುಂದಿನ 3 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸಮಾಜಮುಖಿ ಸೇವಾ ಮನೋಭಾವದ ಸರಳ ವ್ಯಕ್ತಿತ್ವದ ವೇಣುಗೋಪಾಲ್ ಶೆಟ್ಟಿ, ಪಡುಮನೆ ಕರಂಬಾರು ಆಯ್ಕೆಯಾಗಿದ್ಧಾರೆ.
ಹೋಟೆಲ್ ಉದ್ಯಮಿಯಾಗಿರುವ ವೇಣುಗೋಪಾಲ್ ಎಲ್ ಶೆಟ್ಟಿ ಅವರು ಮುಂಬೈ ಥಾಣೆ ಬಂಟ್ಸ್ ಬಂಟ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ವೇಣುಗೋಪಾಲ್ ಶೆಟ್ಟಿ ಅವರು ಸಮಾಜ ಸೇವೆಯೊಂದಿಗೆ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದುಡಿದಿದ್ದಾರೆ.