ಎಕ್ಕಾರು ಬಂಟರ ಸಂಘದ ವಾರ್ಷಿಕ ಕ್ರೀಡೋತ್ಸವ
Thursday, October 30, 2025
ಬಜಪೆ:ಎಕ್ಕಾರು ಬಂಟರ ಸಂಘದ ವಾರ್ಷಿಕ ಕ್ರೀಡೋತ್ಸವವು ಎಕ್ಕಾರು ಬಂಟರ ಭವನದ ಮೈದಾನದಲ್ಲಿ ನಡೆಯಿತು.ವಾರ್ಷಿಕ ಕ್ರೀಡೋತ್ಸವವನ್ನು ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ (ತಿಮ್ಮ ಕಾವ) ದೀಪ ಬೆಳಗಿಸಿ ಉದ್ಘಾಟಿಸಿದರು.
ಎಕ್ಕಾರು ಬಂಟ ಸಂಘದ ಮಹಾ ಪೋಷಕ ಕೃಷ್ಣ ಡಿ ಶೆಟ್ಟಿ ಮುಂಬಾಯಿ ಹಾಗೂ ಭಾಸ್ಕರ ಶೆಟ್ಟಿ ನಡ್ಯೋಡಿ ಗುತ್ತು, ಗುರುದೇವ್ ಕಲ್ಯಾಣ್ ಇವರ ಉಪಸ್ಥಿತಿಯಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು
ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಮಾರು 250 ಕ್ಕೂ ಹೆಚ್ಚು ಬಂಟ ಸಮಾಜ ಬಾಂಧವರು ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದರು. ಮಹಿಳೆಯರಿಗೆ ಹಾಗೂ ಪುರುಷರಿಗಾಗಿ ಅಯಾಯ ವಯೋಮಾನದ ಆಧಾರದಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಕ್ಕಾರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಸ್ವಾಗತಿಸಿ , ಕಾರ್ಯಕ್ರಮವನ್ನು ನಿರೂಪಿಸಿದರು.
ನ 2 ರಂದು ಬಂಟ ಸಮಾಜ ಬಾಂಧವರ ಸಭೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿ ವೇತನ,ಹಿರಿಯ ಕೃಷಿಕರಿಗೆ ಸನ್ಮಾನ ಹಾಗೂ ಮಹಾಸಭೆ ನಡೆಯಲಿದೆ ಎಂದು ಎಕ್ಕಾರು ಬಂಟರ ಸಂಘದ ಪ್ರಕಟನೆ ತಿಳಿಸಿದೆ.