ಬಜ್ಪೆ ನಾಗರೀಕರ ಹಿತರಕ್ಷಣಾ ವೇದಿಕೆಯ ಬೇಡಿಕೆಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ,ರಸ್ತೆಕಾಮಗಾರಿಗೆ ಕಾಯಕಲ್ಪ
Thursday, October 30, 2025
ಬಜಪೆ:ಕಂದಾವರ ಗ್ರಾಮ ಪಂಚಾಯತ್ ಹಾಗೂ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಕರಂಬಾರು ಹಾಗೂ ಅಲ್ಲಲ್ಲಿ ಹೊಂಡಗಳು ಉಂಟಾಗಿ ವಾಹನಿಗರು ದಿನಂಪ್ರತಿ ಸಮಸ್ಯೆಯನ್ನು ಅನುಭವಿಸುವಂತಾಗಿದೆ.ಅಲ್ಲದೆ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಜ್ಪೆಯ ಮುರನಗರದ ರಸ್ತೆ ಯು ತೀರ ಹದಗೆಟ್ಟಿದ್ದು, ಹದಗೆಟ್ಟ ರಾಜ್ಯಹೆದ್ದಾರಿಯ ದುರಸ್ತಿ ಕಾರ್ಯದ ಬಗ್ಗೆ ಬಜ್ಪೆ ನಾಗರೀಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ ರವರ ಸಮ್ಮುಖದಲ್ಲಿ ವೇದಿಕೆಯು ಒತ್ತಾಯಿಸಿದ್ದು,ವೇದಿಕೆಯ ಬೇಡಿಕೆಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆಯು ಸುಮಾರು ಒಂದು ಕೋಟಿ ರೂ ಅನುದಾನದೊಂದಿಗೆ ಬಜ್ಪೆ ಮುರನಗರದ ರಸ್ತೆ ಕಾಮಗಾರಿಯನ್ನು ಆರಂಭಿಸಿದೆ.ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಎಇಇ ಪ್ರಥ್ವಿರಾಜ್ ,ಹೇಮಂತ್ ಪರಿಶೀಲಿಸಿ ದರು. ಹೊಂಡ ಗುಂಡಿಗಳಿಂದ ತುಂಬಿ
ಹದಗೆಟ್ಟ ಮಂಗಳೂರು - ಕರಂಬಾರು - ಬಜಪೆ ಹೆದ್ದಾರಿಯ ಡಾಮರೀಕರಣ ಕಾಮಗಾರಿಯು ಆರಂಭಿಸುದಾಗಿ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಜಯ ಗೋಪಾಲ ಸುವರ್ಣ ,ಕಾರ್ಯದರ್ಶಿ ಹಾಗೂ ಇಂಟಕ್ ನ ಪ್ರಧಾನ ಕಾರ್ಯದರ್ಶಿ ನಿಸಾರ್ ಕರಾವಳಿ , ದಲಿತ ಸಂಘದ ರಾಜ್ಯ ಸಂಚಾಲಕ ದೇವದಾಸ್,ದಲಿತ ಸಂಘದ ಮುಖಂಡ ಮಂಜಪ್ಪ ಪುತ್ರನ್
ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್, ವಿಜಯ ,ಬಿ ಹೆಚ್,ಖಾದರ್ ಜರಿ ,ನೌಶಾದ್ ,ಅಝರ್ ,
ಹಮೀದ್ ,ಅಝೀಜ್ ,ಅಶ್ರಫ್ ,
ಜಯಂತ್ ಮಾಸ್ಟರ್ ,ಹಫೀಜ್ ಕೊಳಂಬೆ ,ನಿಸಾರ್ .ಒನ್ ,ಸುಧಾಕರ ,ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳಾದ ಅಶ್ರಫ್ ,ಸಂತು ,ರುಕ್ಕಯ್ಯ ,ಕಾರ್ತಿಕ್ ಹಾಗೂ ಗ್ರಾಮಸ್ಥರು ಇದ್ದರು.