ಎಕ್ಕಾರು:ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ
Sunday, September 21, 2025
ಬಜಪೆ:ಇಂಟರಾಕ್ಟ್ ಕ್ಲಬ್ ಒಂದು ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಶಾಲೆಗಳಲ್ಲಿ ಇಂಟರಾಕ್ಟ್ ಕ್ಲಬ್ ಗಳನ್ನು ನಡೆಸುವುದರಿಂದ ಜಾಗತಿಕ ಮಟ್ಟದಲ್ಲಿ ಸೇವಾ ಯೋಜನೆಯಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತು, ಸ್ನೇಹ ಸಹಕಾರ ಮತ್ತು ಸಂಘಟನಾ ಕೌಶಲವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ರೋ. ಹರೀಶ್ ಶೆಟ್ಟಿ ಹೇಳಿದರು.ಅವರು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭವನ್ನು
ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷೆ ಕು. ಛಾಯೆಶ್ರೀ ಹಾಗೂ ಕಾರ್ಯದರ್ಶಿ ಕು. ಅಪ್ಸನ ಬಾನು ಇವರಿಗೆ ಕೊರಳಪಟ್ಟಿ ಮತ್ತು ದಂಡ ನೀಡಿ ಪದಗ್ರಹಣ ಕಾರ್ಯಕ್ರಮವನ್ನು ನಡೆಸಲಾಯಿತು.
ವೇದಿಕೆಯಲ್ಲಿ ಇಂಟರಾಕ್ಟ್ ಚೇರ್ಮನ್ ರೋ. ಹರೀಶ್ ಶೆಟ್ಟಿ, ರೋಟರಿ ಕಾರ್ಯದರ್ಶಿ ರೋ. ಪ್ರಕಾಶ್ ಆಚಾರ್, ವಲಯ ಸೇನಾನಿ ರೋ.ತ್ಯಾಗರಾಜ್ ಆಚಾರ್ಯ, ರೋ. ಎರಿಕ್ ಪಾಯಸ್, ರೋ. ದಿನೇಶ್ ಆಚಾರ್ಯ, ದೇವಿ ಪ್ರಸಾದ್ ಶೆಟ್ಟಿ, ಇನ್ನರ್ ವೀಲ್ ನ ಸವಿತಾದಿನೇಶ್ .ಬಡಗ ಎಕ್ಕಾರು ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದಿರಾ ಎನ್ ರಾವ್, ಇಂಟರಾಕ್ಟ್ ಕ್ಲಬ್ ನ ಶಾಲಾ ನೋಡಲ್ ಜಯಂತಿ ಉಪಸ್ಥಿತರಿದ್ದರು.
ಅಕ್ಕಮಹಾದೇವಿ ಕಾರ್ಯಕ್ರಮ ನಿರೂಪಿಸಿದರು, ಪ್ರತೀಕ್ಷ ಸ್ವಾಗತಿಸಿದರು. ಭೂಮಿಕ ಶೆಟ್ಟಿ ವಂದಿಸಿದರು.