ಅಲ್ ಇಖ್ಲಾಸ್ ಜುಮಾ ಮಸೀದಿಯಲ್ಲಿ ಮೀಲಾದ್ ಕಾರ್ಯಕ್ರಮ
Sunday, September 21, 2025
ಕಿನ್ನಿಗೋಳಿ: ಇಲ್ಲಿನ ಎಸ್.ಕೋಡಿ ಅಲ್ ಇಖ್ಲಾಸ್ ಜುಮಾ ಮಸೀದಿಯಲ್ಲಿ ಶನಿವಾರ ಮೀಲಾದ್ ಕಾರ್ಯಕ್ರಮ ನಡೆಯಿತು. ಮಸೀದಿಯ ಖತೀಬ್ ಉಮರುಲ್ ಫಾರೂಕ್ ಸಖಾಫಿ ದುವಾ ನೆರವೇರಿಸಿದರು. ಈ ಸಂದರ್ಭ ಕೆ.ಎ. ಅಬ್ದುಲ್ಲ ಪದ್ಮನೂರು, ಕೆ.ಎ. ಅಬ್ದುಲ್ ಖಾದರ್ ಪದ್ಮನೂರು, ಖಾದರ್ ಬಜ್ಪೆ, ಅಬ್ದುಲ್ ರಹ್ಮಾನ್ ಪದ್ಮನೂರು, ಉಮರಬ್ಬ ಪದ್ಮನೂರು, ಅಹ್ಮದ್ ಆದಿಲ್ ಪದ್ಮನೂರು ಇವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ರಿಝ್ವಾನ್ ಬಪ್ಪನಾಡು, ಉಪಾಧ್ಯಕ್ಷ ಮೊಹಮ್ಮದ್ ಅಶ್ರಫ್ ಕಿನ್ನಿಗೋಳಿ, ಕಾರ್ಯದರ್ಶಿ ಸಮೀರ್ ಕೆರೆಕಾಡು ಮತ್ತಿತ್ತರರು ಉಪಸ್ಥಿತರಿದ್ದರು.