ಸುರತ್ಕಲ್: ಲಯನ್ಸ್ ಕ್ಲಬ್ ನ ಅಧಿಕೃತ ಭೇಟಿ ಸಮಾರಂಭ
Monday, September 1, 2025
ಸುರತ್ಕಲ್: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317D ಇದರ ಗವರ್ನರ್ ಕುಡ್ಪಿ ಅರವಿಂದ ಶಣೈ ಅವರು ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ, ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರು ಮತ್ತು ಲಯನ್ಸ್ ಕ್ಲಬ್ ಕರ್ನಿರೆ ಬಳಕುಂಜೆ ಇದರ ಅಧಿಕೃತ ಭೇಟಿ ಸಮಾರಂಭವು ಸುರತ್ಕಲ್ ಲಯನ್ಸ್ ಸೆಂಟರ್ ನಲ್ಲಿ ನಡೆಯಿತು.
ಲಯನ್ಸ್ ಜಿಲ್ಲಾ ಸಂಪುಟ ಸಹ ಕಾರ್ಯದರ್ಶಿ ಚಂದ್ರಹಾಸ ರೈ, ಜಿಲ್ಲಾ ಸಂಪುಟ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ಪ್ರಾಂತ್ಯ ಅಧ್ಯಕ್ಷ ಮಾಧವ ಶೆಟ್ಟಿ, ವಲಯ ಅಧ್ಯಕ್ಷರುಗಳಾದ ರೋಲ್ಪಿ ಡಿಕೊಸ್ಟ, ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕ್ಲಬ್ ಪ್ರತಿನಿಧಿಗಳಾದ ಲೋಕೇಶ್ ಕುರುವನ್, ಚಂದ್ರಶೇಖರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ನೆಲ್ಸನ್ ಲೋಬೊ, ವಿನೋದ್ ಕುಮಾರ್, ಆನಂದ ಅಮೀನ್, ಅನುಪಮ ಶೆಟ್ಟಿ, ದಯಾನಂದ ರೈ, ದೀಪಕ್ ಪೆರ್ಮುದೆ, ಶೇಖರ್ ಶೆಟ್ಟಿ, ಶೆರಿಲ್ ಪಿಂಟೋ, ಶಿವಪ್ರಸಾದ್ ಬಾಳ, ಗಂಗಾಧರ ಪೂಜಾರಿ, ಸತೀಶ್ ಕುಮಾರ್, ವಿಶ್ವನಾಥ್ ಭಂಡಾರಿ ಮೊದಲಾದವರು ಲಯನ್ಸ್ ರಾಜ್ಯಪಾಲರನ್ನು ಸ್ವಾಗತಿಸಿದರು.