-->

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🙏

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು  🙏
ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🙏
ತಾ. ೫ರಿಂದ ಕಟೀಲಿನಲ್ಲಿ ನಂದಿನೀ ಗವ್ಯಮ್ ಗೋ ಉತ್ಪನ್ನಗಳ ಪ್ರದರ್ಶನ, ಮಾರಾಟ

ತಾ. ೫ರಿಂದ ಕಟೀಲಿನಲ್ಲಿ ನಂದಿನೀ ಗವ್ಯಮ್ ಗೋ ಉತ್ಪನ್ನಗಳ ಪ್ರದರ್ಶನ, ಮಾರಾಟ


ಕಟೀಲು : ಕಾಮಧೇನುವಿನ ಮಗಳು ನಂದಿನಿ ನದಿಯಾಗಿ ಹರಿದ ಕ್ಷೇತ್ರ ಕಟೀಲು. ಇಲ್ಲಿ ಗೋಪೂಜೆಗೆ ವಿಶೇಷ ಮಹತ್ವವಿದೆ. ೨೦೦ಕ್ಕೂ ಮಿಕ್ಕಿ ದೇಸೀ ಹಸುಗಳಿರುವ ಮೂರು ಗೋಶಾಲೆಗಳನ್ನು ನಡೆಸುತ್ತಿರುವ ಶ್ರೀ ಕ್ಷೇತ್ರದ ವತಿಯಿಂದ ರಾಜ್ಯದ ವಿವಿಧ ಗೋಶಾಲೆಗಳ ಹಾಗೂ ಗೋಉತ್ಪನ್ನಗಳ ತಯಾರಕರಿಂದ ಪ್ರದರ್ಶನ, ಮಾರಾಟ, ಜಾಗೃತಿ, ಮಾಹಿತಿ ಕಾರ‍್ಯಕ್ರಮವನ್ನು ಸಪ್ಟಂಬರ್ ೫ರಿಂದ ೭ರತನಕ ನಡೆಸಲಾಗುತ್ತಿದೆ. ಕಳೆದ ಎರಡು ವರುಷಗಳಿಂದ ಈ ಕಾರ‍್ಯಕ್ರಮವನ್ನು ನಡೆಸಲಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದ ನಾನಾ ಭಾಗಗಳಿಂದ ಇಪ್ಪತ್ತರಷ್ಟು ಗೋಉತ್ಪನ್ನ ತಯಾರಕರು ಭಾಗವಹಿಸುತ್ತಿದ್ದು, ಜಾಗೃತಿ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಉಚಿತವಾಗಿ ಪಂಚಗವ್ಯ ಚಿಕಿತ್ಸೆಯೂ ಇದೆ.
ಮಜ್ಜಿಗೆ, ತುಪ್ಪ, ಧೂಪ, ಲೋಬಾನ, ಗೋಮಯ, ಪೂಜಾ ಗೋಮೂತ್ರ ಇತ್ಯಾದಿ ಪೂಜಾ ಸಾಮಗ್ರಿಗಳು, ಅರ್ಕ, ಶಾಂಪೂ, ಮುಲಾಮು ತಲೆಗೆ ಹಾಕುವ ಎಣ್ಣೆ, ನೋವು ನಿವಾರಕ ಎಣ್ಣೆ, ದಂತಮಂಜನ-ಹಲ್ಲುಪುಡಿ, ಸ್ನಾನದ ಸಾಬೂನು, ಫೇಸ್ ಕ್ರೀಮ್ ಇತ್ಯಾದಿ ಆರೋಗ್ಯ ಸಂಬಂಧಿ ವಸ್ತುಗಳು, ಗೃಹೋಪಯೋಗಿ ಉತ್ಪನ್ನಗಳು, ಮೊಬೈಲ್ ಸ್ಟ್ಯಾಂಡ್, ಮೊಬೈಲ್ ರೇಡಿಯೇಷನ್ ಚಿಪ್, ಕೀಚೈನ್, ಜೀರ್ಣ ಚೂರ್ಣ, ಜೀವಾಮೃತ ಇತ್ಯಾದಿ ಇತ್ಯಾದಿ ಗೋಉತ್ಪನ್ನಗಳು, ಪಂಚಗವ್ಯ ಆರೋಗ್ಯ ಚಿಕಿತ್ಸೆ ಉತ್ಪನ್ನಗಳು, ದಿನನಿತ್ಯ ಉಪಯೋಗಿ ಪಂಚಗವ್ಯ ಉತ್ಪನ್ನಗಳು, ಕೃಷಿ ಪಂಚಗವ್ಯ ಹೀಗೆ ನಾನಾ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಇದೆ ಎಂದು ಪ್ರಕಟನೆ ತಿಳಿಸಿದೆ. 

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ