ಕಿನ್ನಿಗೋಳಿ ಶ್ರೀ ಶಾರದೆಯ ಪುರಮೆರವಣಿಗೆ, ಶ್ರೀ ದೇವರ ಪ್ರತಿಷ್ಠೆ, ಧ್ವಜಾರೋಹಣ,
Monday, September 29, 2025
ಕಿನ್ನಿಗೋಳಿ:ಕಿನ್ನಿಗೋಳಿ ದಶಮ ವರ್ಷದ ಶಾರದಾ ಮಹೋತ್ಸವವು ಸೆ. 29 ರಿಂದ ಆ. 3 ರವರೆಗೆ ಕಿನ್ನಿಗೋಳಿ ಮಹಾಮ್ಮಾಯಿಕಟ್ಟೆಯ ಶಾರದಾ ಮಂಟಪದ ಬಳಿ ನಡೆಯಲಿದೆ. ಸೋಮವಾರ ಶ್ರೀ ಶಾರದೆಯ ಪುರಮೆರವಣಿಗೆ, ನಡೆದು ನಂತರ ಶ್ರೀ ದೇವರ ಪ್ರತಿಷ್ಠೆ, ಧ್ವಜಾರೋಹಣ, ವಂದೇಮಾತರಂ ದೀಪಪ್ರಜ್ವಲನೆ ನಡೆಯಿತು. ಕೊಡೆತ್ತೂರು ಅರಸುಕುಂಜಿರಾಯ ದೈವಸ್ಥಾನದ ಜಯರಾಮ ಮುಕಾಲ್ದಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶಣೈ, ರಾಜೇಶ್ ನಾಯಕ್, ದಯಾನಂದ ಶೆಟ್ಟಿ ಕೆ.ಜಿ.ಬೆಟ್ಟು, ರಾಜೇಶ್ ಕುಂದರ್, ಪ್ರೇಮ್ ರಾಜ್ ಶೆಟ್ಟಿ ಬರ್ಕೆ, ಶ್ರೀನಿವಾಸ ಶಣೈ, ಕೃಷ್ಣ ಶಣೈ, ಸ್ವರಾಜ್ ಶೆಟ್ಟಿ, ಅಭಿಲಾಷ್ ಶೆಟ್ಟಿ ಕಟೀಲು, ಧನಂಜಯ ಶೆಟ್ಟಿಗಾರ್, ಪ್ರತೀಕ್ ಶೆಟ್ಟಿ, ಪ್ರಕಾಶ್ ಆಚಾರ್ಯ, ಪ್ರತಾಪ್ ಶೆಟ್ಟಿ, ಕಲ್ಪೇಶ್ ಶೆಟ್ಟಿ, ಉಮಾನಾಥ್, ನವೀನ್, ಗಿರೀಶ್ ಉಲ್ಲಂಜೆ ಮತ್ತಿತರರು ಉಪಸ್ಥಿತರಿದ್ದರು.